Select Your Language

Notifications

webdunia
webdunia
webdunia
webdunia

ವೇಗಿ ಮೊಹಮ್ಮದ್ ಶಮಿ ಜಾಗಕ್ಕೆ ಟೀಂ ಇಂಡಿಯಾಕ್ಕೆ ಬಂದ ಯುವ ವೇಗಿ

ಮೊಹಮ್ಮದ್ ಶಮಿ
ಬೆಂಗಳೂರು: ಅಫ್ಘಾನಿಸ್ತಾನ ವಿರುದ್ಧ ಗುರುವಾರದಿಂದ ಬೆಂಗಳೂರಿನಲ್ಲಿ ಪ್ರಾರಂಭವಾಗಲಿರುವ ಏಕೈಕ ಟೆಸ್ಟ್ ಪಂದ್ಯಕ್ಕೆ ಮೊಹಮ್ಮದ್ ಶಮಿ ಅಲಭ್ಯರಾಗಲಿದ್ದಾರೆ.

ಗಾಯಗೊಂಡ ವೇಗಿ ಶಮಿ ಬದಲಿಗೆ ಭಾರತ ತಂಡಕ್ಕೆ ಯುವ ವೇಗಿ ನವದೀಪ್ ಸೈನಿ ಅವರನ್ನು ಆಯ್ಕೆ ಮಾಡಲಾಗಿದೆ. ನಿನ್ನೆ ಬೆಂಗಳೂರಿನ ಎನ್ ಸಿಎಯಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಆಯೋಜಿಸಲಾಗಿದ್ದ ಯೋ ಯೋ ಫಿಟ್ ನೆಸ್ ಟೆಸ್ಟ್ ನಲ್ಲಿ ಶಮಿ ನಪಾಸಾಗಿದ್ದರು.

ಈ ಹಿನ್ನಲೆಯಲ್ಲಿ ಶಮಿಗೆ ತಂಡದಿಂದ ಕೊಕ್ ನೀಡಲಾಗಿದೆ. ಯುವ ವೇಗಿ ಸೈನಿ ರಣಜಿ ಕ್ರಿಕೆಟ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಇದಕ್ಕೂ ಮೊದಲು ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಕೂಡಾ ಗಾಯಗೊಂಡು ಈ ಟೆಸ್ಟ್ ತಂಡದಿಂದ ಹೊರಗುಳಿದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಆಫ್ಘಾನಿಸ್ತಾನ ವಿರುದ್ಧ ಟೆಸ್ಟ್ ಆಡ್ತಾರಾ ಕರುಣ್ ನಾಯರ್?