Publish Date: Thu, 07 Jun 2018 (09:07 IST)
Updated Date: Thu, 07 Jun 2018 (09:09 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ ಮೈದಾನದಲ್ಲಿ ತಾಳ್ಮೆ ಕಳೆದುಕೊಳ್ಳುವುದು ಅಪರೂಪ. ಆದರೆ ಒಮ್ಮೆ ಮಾತ್ರ ಸಹ ಕ್ರಿಕೆಟಿಗ ರವೀಂದ್ರ ಜಡೇಜಾ ಮೇಲೆ ಸಿಟ್ಟಿಗೆದ್ದು ಗುದ್ದುವಷ್ಟು ಕೋಪ ಬಂದಿತ್ತಂತೆ ರೋಹಿತ್ ಗೆ!
ಇದು ಮೈದಾನದಲ್ಲಿ ಅಲ್ಲ. ಕ್ರಿಕೆಟ್ ಸರಣಿಗಾಗಿ ದ.ಆಫ್ರಿಕಾಗೆ ತೆರಳಿದ್ದಾಗ ಜಂಗಲ್ ಸಫಾರಿ ಮಾಡಿದ್ದಾಗ ನಡೆದ ಘಟನೆ ಎಂದು ರೋಹಿತ್ ಶರ್ಮಾ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಈ ಸಫಾರಿಯಲ್ಲಿ ರೋಹಿತ್, ಜಡೇಜಾ ಜತೆಗೆ ಅಜಿಂಕ್ಯಾ ರೆಹಾನೆ, ಶಿಖರ್ ಧವನ್, ರೋಹಿತ್ ಪತ್ನಿ ರಿತಿಕಾ, ರೆಹಾನೆ ಪತ್ನಿ ರಾಧಿಕಾ ಕೂಡಾ ಜತೆಯಾಗಿದ್ದರಂತೆ. ‘ನಾವು ಸಫಾರಿ ಮಾಡುತ್ತಾ ಚಿರತೆಗಳು ಓಡಾಡುವ ಕಾಡಿನ ಮಧ್ಯಕ್ಕೆ ಬಂದಿದ್ದೆವು. ಅಲ್ಲಿ ಆಗಷ್ಟೇ ಬೇಟೆ ಮುಗಿಸಿ ಬಂದ ಎರಡು ಚಿರತೆಗಳಿದ್ದವು. ಚಿರತೆಗಳನ್ನು ನೋಡಿದ ತಕ್ಷಣ ಜಡೇಜಾ ಶಬ್ಧ ಮಾಡಲು ಪ್ರಾರಂಭಿಸಿದ್ದರು. ಹಾಗಾಗಿ ಅವರ ದೃಷ್ಟಿ ನಮ್ಮ ಮೇಲೆ ಬಿತ್ತು. ಆದರೆ ಅವರ ಕಣ್ಣಿಗೆ ಅದೃಷ್ಟವಶಾತ್ ನಾವು ಕಾಣಲಿಲ್ಲ. ಕಂಡಿದ್ದರೆ ನಮ್ಮ ಕತೆ ಅಲ್ಲಿಗೇ ಮುಗಿಯುತ್ತಿತ್ತು. ಈ ಸಂದರ್ಭದಲ್ಲಿ ಜಡೇಜಾಗೆ ಗುದ್ದಿ ಬರುವಷ್ಟು ಸಿಟ್ಟು ಬಂದಿತ್ತು. ಆದರೆ ಶಬ್ಧ ಮಾಡಿದ್ದರೆ ನಮ್ಮ ಕತೆ ಮುಗಿಯುತ್ತಿತ್ತು. ಅದಕ್ಕೇ ತಾಳ್ಮೆಯಿಂದ ಕೂತೆ’ ಎಂದು ರೋಹಿತ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.