Publish Date: Tue, 05 Jun 2018 (09:36 IST)
Updated Date: Tue, 05 Jun 2018 (09:36 IST)
ಮುಂಬೈ: ಅಮೆರಿಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ ಅಲ್ಲಿನ ಜನಪ್ರಿಯ ಕ್ರೀಡೆ ಬೇಸ್ ಬಾಲ್ ಆಡಲು ಹೋಗಿ ಮುಜುಗರಕ್ಕೀಡಾಗಿದ್ದಾರೆ.
ಬೇಸ್ ಬಾಲ್ ಆಟದ ಆರಂಭದಲ್ಲಿ ಬಾಲ್ ಎಸೆಯುವಾಗ ಗುರಿ ತಪ್ಪಿ ಕ್ಯಾಚರ್ ನ ತಲೆ ಮೇಲೆ ಬಾಲ್ ಎಸೆದಿದ್ದಾರೆ. ಇದರಿಂದಾಗಿ ಕೊಂಚ ಮುಜುಗರಕ್ಕೀಡಾಗಿದ್ದಾರೆ.
ಪತ್ನಿ ರಿತಿಕಾ ಸಚ್ ದೇವ್ ಜತೆ ‘ದೇಶ್-ಲೆಜೆಂಡ್ಸ್ ಆಫ್ ಕ್ರಿಕೆಟ್ ಸೀರೀಸ್’ ಕಾರ್ಯಕ್ರಮದ ಅಂಗವಾಗಿ ರೋಹಿತ್ ಅಮೆರಿಕಾದ ಮೂರು ನಗರಗಳ ಪ್ರವಾಸಕ್ಕೆ ತೆರಳಿದ್ದಾರೆ. ಬಳಿಕ ಟ್ವಿಟರ್ ನಲ್ಲಿ ಬೇಸ್ ಬಾಲ್ ಅಂಗಣದಲ್ಲಿ ಪತ್ನಿ ಜತೆ ನಿಂತಿರುವ ಫೋಟೋ ಪ್ರಕಟಿಸಿದ ರೋಹಿತ್, ಇದೊಂದು ವಿಶೇಷ ಅನುಭವವಾಗಿತ್ತು ಎಂದು ಬರೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.