Publish Date: Mon, 04 Jun 2018 (08:52 IST)
Updated Date: Mon, 04 Jun 2018 (08:53 IST)
ನವದೆಹಲಿ: ಈ ಐಪಿಎಲ್ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದ ಕರ್ನಾಟಕ ಕ್ರಿಕೆಟಿಗ ಕೆಎಲ್ ರಾಹುಲ್ ತಮ್ಮ ಕೋಚ್ ವೀರೇಂದ್ರ ಸೆಹ್ವಾಗ್ ಗೆ ಯಶಸ್ಸಿನ ಪೂರ್ಣ ಕ್ರೆಡಿಟ್ ಕೊಟ್ಟಿದ್ದಾರೆ.
ಈ ಐಪಿಎಲ್ ನಲ್ಲಿ ಅದ್ಭುತವಾಗಿ ಆಡಿದ್ದ ರಾಹುಲ್ ‘ಕೋಚ್ ಸೆಹ್ವಾಗ್ ನಮಗೆ ಕೊಟ್ಟ ಸ್ವಾತಂತ್ರ್ಯದಿಂದ ಈ ರೀತಿ ಆಡಲು ಸಾಧ್ಯವಾಯಿತು’ ಎಂದಿದ್ದಾರೆ.
‘ಸೆಹ್ವಾಗ್ ನಮಗೆ ಯಾವತ್ತೂ ಫಲಿತಾಂಶದ ಬಗ್ಗೆ ಒತ್ತಡ ಹೇರುತ್ತಿರಲಿಲ್ಲ. ಫೀಲ್ಡಿಗೆ ಹೋಗಿ ಒತ್ತಡವಿಲ್ಲದೇ ನಗುಮೊಗದಿಂದ ನಿಮ್ಮ ನ್ಯಾಚುರಲ್ ಗೇಮ್ ಆಡಿ. ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಭಯವಿಲ್ಲದೇ ಆಡಿ ಎಂದು ಎಲ್ಲಾ ಆಟಗಾರರಿಗೂ ಸಲಹೆ ಕೊಡುತ್ತಿದ್ದರು. ಇದರಿಂದಾಗಿ ನಮಗೆ ಮೈ ಚಳಿ ಬಿಟ್ಟು ಆಡಲು ಸಾಧ್ಯವಾಯಿತು’ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.