Select Your Language

Notifications

webdunia
webdunia
webdunia
webdunia

ಧೋನಿ ಹೆಸರು ಹೇಳಿಕೊಂಡು ಪಂದ್ಯದ ಟಿಕೆಟ್ ಮಾರುತ್ತಿರುವ ಐರ್ಲೆಂಡ್ ಕ್ರಿಕೆಟ್!

ಧೋನಿ ಹೆಸರು ಹೇಳಿಕೊಂಡು ಪಂದ್ಯದ ಟಿಕೆಟ್ ಮಾರುತ್ತಿರುವ ಐರ್ಲೆಂಡ್ ಕ್ರಿಕೆಟ್!
ನವದೆಹಲಿ , ಗುರುವಾರ, 7 ಜೂನ್ 2018 (08:56 IST)
ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ಆಡುವ ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಈ ಮಾದರಿ ಕ್ರಿಕೆಟ್ ನಲ್ಲಿ ಭಾರೀ ಫೇಮಸ್ಸು. ಇದೇ ಕಾರಣಕ್ಕೆ ಐರ್ಲೆಂಡ್ ಕ್ರಿಕೆಟ್ ಸಂಸ್ಥೆ ಇದೀಗ ತಮ್ಮ ತಂಡ ಟೀಂ ಇಂಡಿಯಾ ವಿರುದ್ಧ ಆಡಲಿರುವ ಪಂದ್ಯದ ಟಿಕೆಟ್ ಮಾರಾಟವಾಗಲು ಧೋನಿಯನ್ನು ಬಳಸಿಕೊಳ್ಳುತ್ತಿದೆ.

ಜೂನ್ 27 ಮತ್ತು 29 ರಂದು ಭಾರತ ಮತ್ತು ಐರ್ಲೆಂಡ್ ನಡುವೆ ಟಿ20 ಸರಣಿ ನಡೆಯಲಿದೆ. ಈ ಪಂದ್ಯ ಭಾರತದಲ್ಲಿ ನಡೆಯುವುದಿದ್ದರೆ ಜನ ಕೂಡಿಕೊಳ್ಳುತ್ತಿದ್ದರು. ಆದರೆ ಇದು ನಡೆಯುತ್ತಿರುವದು ಐರ್ಲೆಂಡ್ ನಲ್ಲಿ.

ಅಲ್ಲಿ ಭಾರತದಷ್ಟು ಕ್ರಿಕೆಟ್ ಕ್ರೇಜ್ ಇಲ್ಲ. ಹೀಗಾಗಿ ಅಲ್ಲಿನ ಕ್ರಿಕೆಟ್ ಮಂಡಳಿ ಜನರನ್ನು ಸೆಳೆಯಲು ಧೋನಿ ಹೆಸರು ಹೇಳಿಕೊಂಡು ಟಿಕೆಟ್ ಮಾರಾಟ ಮಾಡುತ್ತಿದೆ. ಎಂಎಸ್ ಧೋನಿ ಬರುತ್ತಿದ್ದಾರೆ. ಅವರನ್ನು ನೋಡಲು, ಆಡುವುದನ್ನು ನೋಡಲು ಇಂದೇ ನಿಮಗೆ ಅವಕಾಶ ಎಂದು ಟಿಕೆಟ್ ಬುಕ್ ಮಾಡಿಕೊಳ್ಳಲು ಜಾಹೀರಾತು ನೀಡುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಫೋರ್ಬ್ಸ್ ನ ಈ ಪಟ್ಟಯಲ್ಲಿ ವಿರಾಟ್ ಕೊಹ್ಲಿಗೆ ಮಾತ್ರ ಸ್ಥಾನ!