Publish Date: Mon, 11 Jun 2018 (13:01 IST)
Updated Date: Mon, 11 Jun 2018 (13:03 IST)
ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರು ನಟಿಸಿರುವ ಅಮೆರಿಕದಲ್ಲಿ ಇತ್ತೀಚೆಗೆ ಪ್ರಸಾರಗೊಂಡಿರುವ 'ಕ್ವಾಂಟಿ ಕೊ' ಶೋ ನಲ್ಲಿ ಭಾರತೀಯರನ್ನು ಭಯೋತ್ಪಾದಕರಂತೆ ಬಿಂಬಿಸಿರುವುದಕ್ಕೆ ಬಾರೀ ವಿರೋಧ ವ್ಯಕ್ತವಾಗಿದ್ದು, ಈ ಕುರಿತಾಗಿ ಇದೀಗ ನಟಿ ಪ್ರಿಯಾಂಕ ಕ್ಷಮೆ ಕೋರಿದ್ದಾರೆ.
ಈ ಬಗ್ಗೆ ಟ್ವೀಟರ್ ನಲ್ಲಿ ಕ್ಷಮೆ ಕೇಳಿರುವ ನಟಿ ಪ್ರಿಯಾಂಕ ಅವರು,’ ಇತ್ತಿಚೆಗಿನ ಕ್ವಾಂಟಿಕೋ ಸರಣಿಯ ವಿಚಾರವಾಗಿ ಹಲವರ ಭಾವನೆಗಳಿಗೆ ಧಕ್ಕೆಯುಂಟಾಗಿದೆ. ಇದಕ್ಕೆ ನಾನು ದುಃಖಿತಳಾಗಿರುವುದಲ್ಲದೆ ಅದಕ್ಕೆ ನಾನು ಕ್ಷಮೆ ಕೋರುತ್ತೇನೆ.ಅದು ನನ್ನ ಉದ್ದೇಶವಾಗಿರಲಿಲ್ಲ.ನಾನು ಹೆಮ್ಮೆಯ ಭಾರತೀಯಳು ಮತ್ತು ಅದು ಎಂದಿಗೂ ಕೂಡ ಬದಲಾಗುವುದಿಲ್ಲ’ ಎಂದು ಟ್ವೀಟ್ ಮೂಲಕ ಕ್ಷಮೆಯಾಚಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ