Select Your Language

Notifications

webdunia
webdunia
webdunia
webdunia

ಭಾರತ-ಚೀನಾ ಗಡಿ ಉದ್ವಿಗ್ನ: ಅರುಣಾಚಲ ಪ್ರದೇಶಕ್ಕೆ ಹೆಚ್ಚುವರಿ ಸೇನೆ

ಭಾರತ-ಚೀನಾ ಗಡಿ ಉದ್ವಿಗ್ನ: ಅರುಣಾಚಲ ಪ್ರದೇಶಕ್ಕೆ ಹೆಚ್ಚುವರಿ ಸೇನೆ
ನವದೆಹಲಿ , ಗುರುವಾರ, 3 ಸೆಪ್ಟಂಬರ್ 2020 (10:12 IST)
ನವದೆಹಲಿ: ಭಾರತ ಮತ್ತು ಚೀನಾ ಗಡಿಯಲ್ಲಿ ಹೊಸದಾಗಿ ಸಂಘರ್ಷ ನಡೆದ ಹಿನ್ನಲೆಯಲ್ಲಿ ಭಾರತೀಯ ಸೇನೆ ಅರುಣಾಚಲ ಪ್ರದೇಶಕ್ಕೆ ಹೆಚ್ಚುವರಿ ಸೈನಿಕರನ್ನು ರವಾನಿಸಿದೆ.

 
ಈ ಭಾಗದಲ್ಲಿ ಚೀನಾ ಸೇನೆ ಅತಿಕ್ರಮಣ ಮಾಡುವ ಸಾಧ‍್ಯತೆಯಿರುವುದರಿಂದ ಭಾರತೀಯ ಸೇನೆ ಕಟ್ಟೆಚ್ಚರ ವಹಿಸಿದೆ. ಮೊನ್ನೆಯಷ್ಟೇ ಪ್ಯಾಂಗಾಂಗ್ ಪ್ರದೇಶದಲ್ಲಿ ಚೀನಾ ಸೇನೆ ಅತಿಕ್ರಮಿಸಲು ಯತ್ನಿಸಿದಾಗ ಭಾರತೀಯ ಸೇನೆ ಯಶಸ್ವಿಯಾಗಿ ಹಿಮ್ಮೆಟ್ಟಿತ್ತು. ಈ ಘಟನೆ ಬಳಿಕ ಭಾರತೀಯ ಸೇನೆ ಮತ್ತಷ್ಟು ಚುರುಕಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಎದುರಾಳಿ ರಾಷ್ಟ್ರದ ಅತಿಕ್ರಮಣ ತಡೆಯಲು ಸಕಲ ಸನ್ನದ್ಧವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಟ್ವಿಟರ್ ಗೆ ಕನ್ನ ಹಾಕಿದ ಹ್ಯಾಕರ್ ಖದೀಮರು