Select Your Language

Notifications

webdunia
webdunia
webdunia
webdunia

ಇಮ್ರಾನ್ ಖಾನ್ ಅಧಿಕಾರಕ್ಕೆ ಕತ್ತರಿ! ಆಪ್ತರಿಗೆ ಸಂಕಷ್ಟ ಎದುರಾಯ್ತು

ಇಮ್ರಾನ್ ಖಾನ್ ಅಧಿಕಾರಕ್ಕೆ ಕತ್ತರಿ! ಆಪ್ತರಿಗೆ ಸಂಕಷ್ಟ ಎದುರಾಯ್ತು
ಇಸ್ಲಾಮಾಬಾದ್ , ಗುರುವಾರ, 7 ಏಪ್ರಿಲ್ 2022 (08:19 IST)
ಇಸ್ಲಾಮಾಬಾದ್ : ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ಗೆ ಈಗ ಕಷ್ಟ ಕಾಲ.

ಇಮ್ರಾನ್ ಅಧಿಕಾರಕ್ಕೆ ಕತ್ತರಿ ಬಿದ್ದ ಕೂಡಲೇ ಅವರ ಆಪ್ತರು, ಅನುಯಾಯಿಗಳಲ್ಲಿ ಬಂಧನ ಭೀತಿ ಶುರುವಾಗಿದೆ.

ಒಬ್ಬೊಬ್ಬರೇ ಸದ್ದಿಲ್ಲದೇ ಪಾಕಿಸ್ತಾನ ತೊರೆಯುತ್ತಿದ್ದಾರೆ. ಭಾನುವಾರವೇ ಇಮ್ರಾನ್ ಮೂರನೇ ಪತ್ನಿ ಬುಷ್ರಾ ಬೀಬಿಯ ಪರಮಾಪ್ತೆ ಫರ್ಹಾಖಾನ್ ಖಾಸಗಿ ಜೆಟ್ನಲ್ಲಿ ದುಬೈಗೆ ಎಸ್ಕೇಪ್ ಆಗಿದ್ದಾರೆ.

ಈ ವೇಳೆ ಆಕೆ ಹೊಂದಿದ್ದ ವ್ಯಾನಿಟಿ ಬ್ಯಾಗ್ ಬೆಲೆ 90ಸಾವಿರ ಡಾಲರ್. ಇದನ್ನು ನೋಡಿದ್ರೇ ಗೊತ್ತಾಗುತ್ತೆ ಆಕೆ ಎಷ್ಟರ ಮಟ್ಟಿಗೆ ಭ್ರಷ್ಟಾಚಾರ ಎಸಗಿದ್ದಾರೆಂದು ವಿಪಕ್ಷ ಹರಿಹಾಯ್ದಿದೆ.

ಅಧಿಕಾರಿಗಳ ವರ್ಗಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಈಕೆ ದೊಡ್ಡಮಟ್ಟದಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ. 32 ಮಿಲಿಯನ್ ಡಾಲರ್ ಹಣವನ್ನು ಲೂಟಿ ಮಾಡಿದ್ದಾರೆ ಎನ್ನಲಾಗಿದೆ. ವಿಪಕ್ಷಗಳು ಈಕೆಯನ್ನು ಮದರ್ ಆಫ್ ಆಲ್ ಸ್ಕ್ಯಾಂಡಲ್ಸ್ ಎಂದು ಆಕ್ರೋಶ ಹೊರಹಾಕುತ್ತಿವೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕಾಶ್ಮೀರದಲ್ಲಿ ಪಾಕಿಸ್ತಾನಿ ಭಯೋತ್ಪಾದಕರ ದಾಳಿ!