Select Your Language

Notifications

webdunia
webdunia
webdunia
Sunday, 6 April 2025
webdunia

ಇಮ್ರಾನ್ ಖಾನ್ : ಬಂಧನದ ಭೀತಿಯಿಂದಾಗಿ ಪತ್ನಿಯ ಕ್ಲೋಸ್ ಫ್ರೆಂಡ್ ಪಲಾಯನ!

ಪಾಕಿಸ್ತಾನ
ಲಾಹೋರ್ , ಬುಧವಾರ, 6 ಏಪ್ರಿಲ್ 2022 (08:26 IST)
ಲಾಹೋರ್ : ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಮೂರನೇ ಪತ್ನಿ ಬುಶ್ರಾ ಬಿಬಿ ಅವರ ಆತ್ಮೀಯ ಸ್ನೇಹಿತೆ ಫರಾಹ್ ಖಾನ್ ಬಂಧನದ ಭೀತಿಯಿಂದಾಗಿ ದುಬೈಗೆ ಪಲಾಯನಗೈದಿದ್ದಾರೆ.

ಇಮ್ರಾನ್ ಖಾನ್ ಅವರ ಸರ್ಕಾರ ಉರುಳಿದರೆ ಫರಾಹ್ ಖಾನ್ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ವರದಿಗಳಾಗಿವೆ. ಹೀಗಾಗಿ ಭೀತಿಯಿಂದ ಅವರು ದೇಶ ತೊರೆದಿದ್ದಾರೆ.

ಈಗಾಗಲೇ ಫರಾಹ್ ಖಾನ್ ಅವರ ಪತಿ ಹಸನ್ ಗುಜ್ಜರ್ ಕೂಡ ಪಾಕಿಸ್ತಾನ ತೊರೆದು ಅಮೆರಿಕದಲ್ಲಿ ನೆಲೆಸಿದ್ದಾರೆ.  ಫರಾಹ್ ಅವರು ಭಾನುವಾರ ಪಾಕಿಸ್ತಾನ ತೊರೆದು ದುಬೈಗೆ ಪಲಾಯನವಾಗಿದ್ದಾರೆ ಎಂದು ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

ಅಧಿಕಾರಿಗಳನ್ನು ಅವರು ಬಯಸಿದ ಸ್ಥಳಗಳಿಗೆ ವರ್ಗಾವಣೆ ಮಾಡಿಸಲು ಫರಾಹ್ ಅವರು ಲಂಚ ಪಡೆದಿದ್ದಾರೆ ಎಂದು ಪ್ರತಿಪಕ್ಷಗಳು ಗಂಭೀರ ಆರೋಪ ಹೊರಿಸಿವೆ. ಇದುವರೆಗೂ ಫರಾಹ್ ಅವರು 6 ಬಿಲಿಯನ್ ಪಾಕಿಸ್ತಾನಿ ರೂಪಿಯನ್ನು (32 ಮಿಲಿಯನ್ ಯುಎಸ್ ಡಾಲರ್) ಲಂಚ ಪಡೆದಿದ್ದಾರೆ. ಹೀಗಾಗಿ ಅವರನ್ನು ʼಎಲ್ಲಾ ಹಗರಣಗಳ ತಾಯಿʼ ಎಂದು ಪ್ರತಿಪಕ್ಷಗಳು ಕರೆದಿವೆ. 

ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್) ಉಪಾಧ್ಯಕ್ಷರು ಹಾಗೂ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ ಮರ್ಯಮ್ ನವಾಜ್ ಅವರು, ಇಮ್ರಾನ್ ಮತ್ತು ಅವರ ಪತ್ನಿಯ ಆಜ್ಞೆಯ ಮೇರೆಗೆ ಫರಾಹ್ ಈ ಭ್ರಷ್ಟಾಚಾರವನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಸ್ಲಿಂ ಏರಿಯಾಗಳಿಗೆ ನಿರಂತರ ವಿದ್ಯುತ್