Select Your Language

Notifications

webdunia
webdunia
webdunia
webdunia

ಫಲಿತಾಂಶ ಏನೇ ಬರಲಿ ಮರಳುತ್ತೇನೆ : ಇಮ್ರಾನ್ ಖಾನ್

ಫಲಿತಾಂಶ ಏನೇ ಬರಲಿ ಮರಳುತ್ತೇನೆ : ಇಮ್ರಾನ್ ಖಾನ್
ಇಸ್ಲಾಮಾಬಾದ್ , ಶುಕ್ರವಾರ, 1 ಏಪ್ರಿಲ್ 2022 (10:44 IST)
ಇಸ್ಲಾಮಾಬಾದ್ : ಅವಿಶ್ವಾಸ ನಿಲುವಳಿ ಫಲಿತಾಂಶ ಏನೇ ಇರಲಿ, ಮುಂದೆಯೂ ನಾನು ಇನ್ನೂ ಬಲಿಷ್ಠನಾಗಿ ಮರಳುತ್ತೇನೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
 
ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, ಅಲ್ಲಾಹು ನನಗೆ ಕೀರ್ತಿ, ಸಂಪತ್ತು ಸೇರಿದಂತೆ ಎಲ್ಲವನ್ನೂ ಅನುಗ್ರಹಿಸಿದ್ದಾನೆ. ನಾನು ಈ ಸ್ವತಂತ್ರ್ಯ ದೇಶದಲ್ಲಿ ಜನಿಸಿದ ಮೊದಲ ತಲೆಮಾರಿನವನು. ನನಗಿಂತ 5 ವರ್ಷ ಮೊದಲೇ ಪಾಕಿಸ್ತಾನ ಹುಟ್ಟಿಕೊಂಡಿತ್ತು.

ನನ್ನ ಹೆತ್ತವರು ಗುಲಾಮಗಿರಿ ಸಮಯದಲ್ಲಿ ಜನಿಸಿದವರು. ನಾನು ಈ ಸ್ವತಂತ್ರ್ಯ ದೇಶದಲ್ಲಿ ಹುಟ್ಟಿದ ಅದೃಷ್ಟಶಾಲಿ. ಗುಲಾಮಗಿರಿಯಿಂದ ಮೇಲೆ ಏಳುವುದು ಎಷ್ಟು ಕಷ್ಟ ಎಂಬುದು ನನಗೆ ತಿಳಿದಿದೆ ಎಂದು ಹೇಳಿದರು.

ನಾನು ರಾಜಕೀಯ ಸೇರಿದಾಗ ಯಾರ ಮುಂದೆಯೂ ತಲೆ ಬಾಗುವುದಿಲ್ಲ ಹಾಗೂ ನನ್ನ ದೇಶವನ್ನು ಯಾರ ಮುಂದೆಯೂ ತಲೆ ಬಾಗಲು ಬಿಡುವುದಿಲ್ಲ ಎಂದು ಶಪಥ ಮಾಡಿದ್ದೇನೆ. ಇದರ ಅರ್ಥ ನನ್ನ ದೇಶವನ್ನು ಎಂದಿಗೂ ಇನ್ನೊಬ್ಬರ ಗುಲಾಮನಾಗಲು ಬಿಡುವುದಿಲ್ಲ.

 

Share this Story:

Follow Webdunia kannada

ಮುಂದಿನ ಸುದ್ದಿ

ಹೆಚ್ಡಿಕೆಯಿಂದ ಹೊಸ ರಾಜಕೀಯ ದಾಳ?