Publish Date: Wed, 06 Apr 2022 (08:17 IST)
Updated Date: Wed, 06 Apr 2022 (08:19 IST)
ಜೈಪುರ : ಕರ್ನಾಟಕದಲ್ಲಿ ಹಿಂದುತ್ವ ರಾಜಕಾರಣ ನಡೆಯುತ್ತಿದ್ದರೆ, ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ಮುಸ್ಲಿಮರ ಓಲೈಕೆ ಪಾಲಿಟಿಕ್ಸ್ ನಡೆಯುತ್ತಿದೆ.
ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಹೊರಡಿಸಿರುವ ಆದೇಶವೊಂದು ವಿವಾದಕ್ಕೆ ಕಾರಣವಾಗಿದೆ.
ರಂಜಾನ್ ತಿಂಗಳಲ್ಲಿ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ದಿನದ 24 ಗಂಟೆಯೂ ನಿರಂತರ ವಿದ್ಯುತ್ ಪೂರೈಸಬೇಕು ಎಂದು ಜೋಧ್ಪುರ ಡಿಸ್ಕಾಮ್ ಆದೇಶ ಹೊರಡಿಸಿದೆ.
ಉಪವಾಸ ಇರುವ ಮುಸ್ಲಿಮರಿಗೆ ಬಿಸಿಲ ಬೇಗೆಯಿಂದ ಯಾವುದೇ ತೊಂದರೇ ಆಗಬಾರದು. ಹೀಗಾಗಿ ಎಲ್ಲೆಡೆ ಇಡೀ ತಿಂಗಳು ವಿದ್ಯುತ್ ಕಡಿತವಾಗದಂತೆ ನೋಡಿಕೊಳ್ಳಬೇಕು ಎಂದು ಸುತ್ತೋಲೆ ಕಳಿಸಿದೆ.