Publish Date: Sat, 02 Apr 2022 (10:19 IST)
Updated Date: Sat, 02 Apr 2022 (10:21 IST)
ಮಂಡ್ಯ: ಬಾಲ್ಯ ವಿವಾಹಕ್ಕೊಳಗಾದ ಬಾಲಕಿಯನ್ನು ಅಧಿಕಾರಿಗಳು ರಕ್ಷಿಸಿದ ಘಟನೆ ಇಲ್ಲಿ ನಡೆದಿದೆ. ಪರೀಕ್ಷೆ ಬರೆಯಲು ಹೋಗಿದ್ದ ಬಾಲಕಿ ತನಗೆ ವಿವಾಹವಾದ ಬಗ್ಗೆ ಸಹಪಾಠಿಗಳಲ್ಲಿ ಹೇಳಿಕೊಂಡಿದ್ದಳು.
ಎಸ್ಎಸ್ಎಲ್ ಸಿ ಓದುತ್ತಿರುವ ಬಾಲಕಿಗೆ ಪೋಷಕರು ಬಲವಂತವಾಗಿ ಮದುವೆ ಮಾಡಿಸಿದ್ದರು. ಪರೀಕ್ಷೆ ಬರೆಯಲು ಹೋಗುವಾಗ ತಾಳಿ, ಕಾಲುಂಗರ ಬಿಚ್ಚಿಸಿ ಕಳುಹಿಸಿದ್ದರು. ಆದರೆ ಬಾಲಕಿ ತನ್ನ ಸಹಪಾಠಿಗಳಿಗೆ ತನಗಾದ ಅನ್ಯಾಯದ ಬಗ್ಗೆ ಹೇಳಿಕೊಂಡಿದ್ದಳು.
ಈ ಬಗ್ಗೆ ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಬಳಿಕ ಅಧಿಕಾರಿಗಳು ಬಾಲಕಿಯನ್ನು ರಕ್ಷಿಸಿದ್ದಾರೆ. ಪೋಷಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.