Select Your Language

Notifications

webdunia
webdunia
webdunia
webdunia

ಅತ್ಯಾಚಾರ ಆರೋಪಿಗಳನ್ನು 15 ವರ್ಷಗಳ ಬಳಿಕ ಸೆರೆಹಿಡಿದ ಪೊಲೀಸರು!

ಅತ್ಯಾಚಾರ ಆರೋಪಿಗಳನ್ನು 15 ವರ್ಷಗಳ ಬಳಿಕ ಸೆರೆಹಿಡಿದ ಪೊಲೀಸರು!
ನವದೆಹಲಿ , ಶುಕ್ರವಾರ, 1 ಏಪ್ರಿಲ್ 2022 (11:47 IST)
ನವದೆಹಲಿ: 15 ವರ್ಷಗಳ ಹಿಂದೆ ನಡೆದಿದ್ದ ಅಪ್ರಾಪ್ತ ಬಾಲಕಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 47 ವರ್ಷದ ವ್ಯಕ್ತಿ ಮತ್ತು ಆತನ ಸಹೋದರಿಯನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.

ಬರೋಬ್ಬರಿ 15 ವರ್ಷಗಳ ಬಳಿಕ ದೆಹಲಿ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳಿಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. 2006 ರಲ್ಲಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ 13 ವರ್ಷದ ಬಾಲಕಿಯನ್ನು ಆರೋಪಿ ಅಪಹರಿಸಿ ತನ್ನ ಹಳ್ಳಿಗೆ ಕರೆದುಕೊಂಡು ಹೋಗಿದ್ದ. ಬಳಿಕ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಅಕ್ರಮ ಸಂಬಂಧವಿಟ್ಟುಕೊಂಡಿದ್ದ.

ಕೆಲವು ದಿನಗಳ ಬಳಿಕ ಆಕೆಗೆ ಯಾರಿಗೂ ಈ ವಿಚಾರ ತಿಳಿಸದಂತೆ ಬೆದರಿಕೆ ಹಾಕಿ ಬಸ್ ನಿಲ್ದಾಣವೊಂದರಲ್ಲಿ ಕರೆತಂದುಬಿಟ್ಟಿದ್ದ.  ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ. ಇದೀಗ ಸತತ ಪ್ರಯತ್ನದ ಬಳಿಕ ಪೊಲೀಸರು ಆರೋಪಿಯನ್ನು ಮತ್ತು ಆತನಿಗೆ ಸಹಾಯ ಮಾಡಿದ್ದ ಸಹೋದರಿಯನ್ನು ಸೆರೆಹಿಡಿದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುವತಿಗೆ ಆಮಿಷವೊಡ್ಡಿ ಎಳೆದೊಯ್ದು ಅತ್ಯಾಚಾರ