Select Your Language

Notifications

webdunia
webdunia
webdunia
webdunia

ಇಮ್ರಾನ್ ಖಾನ್ ಮಾಜಿ ಪತ್ನಿಗೆ ಮೂರನೇ ಮದುವೆ

webdunia
ಇಸ್ಲಾಮಾಬಾದ್ , ಶನಿವಾರ, 24 ಡಿಸೆಂಬರ್ 2022 (10:52 IST)
ಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾಜಿ ಪತ್ನಿ ರೆಹಮ್ ಖಾನ್ ಮೂರನೇ ಮದುವೆಯಾಗಿದ್ದಾರೆ. ತನಗಿಂತ 13 ವರ್ಷ ಕಿರಿಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಯುನೈಟೆಡ್ ಸ್ಟೇಟ್ಸ್ನಲ್ಲಿ ನಡೆದ ಸಮಾರಂಭದಲ್ಲಿ ಮಾಡೆಲ್ ಮತ್ತು ನಟ ಮಿರ್ಜಾ ಬಿಲಾಲ್ ಬೇಗ್ ಅವರನ್ನು ವಿವಾಹವಾಗಿರುವ ರೆಹಮ್ ಖಾನ್ ಹೇಳಿಕೊಂಡಿದ್ದಾರೆ. ಮಿರ್ಜಾ ಬಿಲಾಲ್ ಪೋಷಕರು ಮತ್ತು ನನ್ನ ಮಗ ನನ್ನ ವಕೀಲ್ ಆಶೀರ್ವಾದದೊಂದಿಗೆ ನಾವು ಸಿಯಾಟಲ್ನಲ್ಲಿ ವಿವಾಹವಾಗಿದ್ದೇವೆ ಎಂದು ರೆಹಮ್ ಟ್ವೀಟ್ ಮಾಡಿ ತಿಳಿಸಿದ್ದಾರೆ. 

ರೆಹಮ್ ಖಾನ್ಗೆ 49 ಹಾಗೂ ಮಿರ್ಜಾ ಬಿಲಾಲ್ಗೆ 36 ವಯಸ್ಸು. ಯುಎಸ್ ಮೂಲದ ಕಾರ್ಪೊರೇಟ್ ವೃತ್ತಿಪರ ಮತ್ತು ಮಾಜಿ ಮಾಡೆಲ್ ಮಿರ್ಜಾ ಬಿಲಾಲ್ ಬೇಗ್ ಅವರಿಗೂ ಇದು ಮೂರನೇ ವಿವಾಹವಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ಹೇಗಿದೆ ಕೊರೊನಾ ಪರಿಸ್ಥಿತಿ?