Select Your Language

Notifications

webdunia
webdunia
webdunia
webdunia

ಸಿಲಿಂಡರ್ ಸ್ಪೋಟದಲ್ಲಿ 4 ಸಾವು, 60 ಮಂದಿಗೆ ಗಾಯ

ಸಿಲಿಂಡರ್ ಸ್ಪೋಟದಲ್ಲಿ 4 ಸಾವು, 60 ಮಂದಿಗೆ ಗಾಯ
ಜೈಪುರ , ಶುಕ್ರವಾರ, 9 ಡಿಸೆಂಬರ್ 2022 (12:46 IST)
ಜೈಪುರ : ಮದುವೆ ಮನೆಯಲ್ಲಿ ಸಂಭ್ರಮದ ವಾತಾವರಣದಿಂದ ಕೂಡಿರುವಾಗಲೇ ದುರ್ಘಟನೆಯೊಂದು ನಡೆದು, ನಾಲ್ವರು ಅತಿಥಿಗಳು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಜೋಧ್ಪುರ ಬಳಿ ಗುರುವಾರ ನಡೆದಿದೆ.
 
ಜೋಧ್ಪುರದಿಂದ 60 ಕಿ.ಮೀ ದೂರದಲ್ಲಿರುವ ಭುಂಗ್ರಾ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ವರನ ಮನೆಯಿಂದ ಮದುವೆ ಮಂಟಪದೆಡೆಗೆ ಮೆರವಣಿಗೆ ಹೊರಡಬೇಕಿದ್ದ ಸ್ವಲ್ಪ ಹೊತ್ತಿಗೂ ಮೊದಲೇ ಸಿಲಿಂಡರ್ ಸ್ಫೋಟಗೊಂಡು ನಾಲ್ವರು ಅತಿಥಿಗಳು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಸುಮಾರು 60 ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಮೂಲಗಳ ಪ್ರಕಾರ ಮದುವೆ ಊಟವನ್ನು ಸಿದ್ಧಪಡಿಸಲು ಇಟ್ಟಿದ್ದ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದ ರಭಸಕ್ಕೆ ಮದುವೆ ಮನೆಯ ಒಂದು ಭಾಗ ಕುಸಿದು ಬಿದ್ದಿದೆ. ಘಟನೆಯಲ್ಲಿ 12 ಜನರ ಸ್ಥಿತಿ ಗಂಭೀರವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಫ್ರಾನ್ಸ್‌ ಯುವಜನತೆಗೆ ಉಚಿತ ಕಾಂಡೋಮ್‌