Select Your Language

Notifications

webdunia
webdunia
webdunia
webdunia

ಪ್ರಿಯತಮೆ ಬೇರೊಬ್ಬನನ್ನು ಮದುವೆಯಾದಳು ಎಂದು ಗುಂಡು ಹಾರಿಸಿದ ಬಾಲಕ!

ಪ್ರಿಯತಮೆ ಬೇರೊಬ್ಬನನ್ನು ಮದುವೆಯಾದಳು ಎಂದು ಗುಂಡು ಹಾರಿಸಿದ ಬಾಲಕ!
ಜೈಪುರ , ಶನಿವಾರ, 10 ಡಿಸೆಂಬರ್ 2022 (10:45 IST)
ಜೈಪುರ : ಬೇರೊಬ್ಬ ವ್ಯಕ್ತಿಯೊಂದಿಗೆ ಗರ್ಲ್ಫ್ರೆಂಡ್ ಮದುವೆಯಾಗಿದ್ದಕ್ಕೆ ಬಾಲಕನೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ನಡೆದಿದೆ.

ಯಶ್ ವ್ಯಾಸ್ (17) ಆತ್ಮಹತ್ಯೆಗೆ ಶರಣಾದ ಬಾಲಕ. ಯಶ್ ವ್ಯಾಸ್ ಹಾಗೂ ಆತನ ಗೆಳತಿ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಇಬ್ಬರು ಪ್ರೀತಿಸುತ್ತಿದ್ದರು. ಆದರೆ ಹುಡುಗಿಯು ಬೇರೆ ವ್ಯಕ್ತಿಯನ್ನು ಮದುವೆ ಆಗಿದ್ದಾಳೆ. ಇದರಿಂದ ಮನನೊಂದ ಯಶ್ ವ್ಯಾಸ್ ತನ್ನ ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದ.

ಅದಾದ ಬಳಿಕ ಮಹಾತ್ಮಗಾಂಧಿ ಆಸ್ಪತ್ರೆಯ ಆವರಣದಲ್ಲಿ ಯಶ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನು ನೋಡಿದ ಜನರು ಆತನನ್ನು ಕೂಡಲೇ ಆಸ್ಪತ್ರೆಯೊಳಗೆ ಕರೆದೊಯ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಯಾವತ್ತು ಕೂಡ ಸತ್ಯ ಒಪ್ಪಿಕೊಳ್ಳಲ್ಲ : ಆರಗ