Select Your Language

Notifications

webdunia
webdunia
webdunia
webdunia

ಸರ್ಕಾರಿ ಹಣ ದುರ್ಬಳಕೆ ಪ್ರಕರಣ; ಪ್ರಧಾನಿ ಪತ್ನಿ ದೋಷಿ ಎಂದ ಕೋರ್ಟ್

ಸರ್ಕಾರಿ ಹಣ ದುರ್ಬಳಕೆ ಪ್ರಕರಣ; ಪ್ರಧಾನಿ ಪತ್ನಿ ದೋಷಿ ಎಂದ ಕೋರ್ಟ್
ಇಸ್ರೇಲ್ , ಸೋಮವಾರ, 17 ಜೂನ್ 2019 (09:15 IST)
ಇಸ್ರೇಲ್ : ಸರ್ಕಾರಿ ಹಣ ದುರ್ಬಳಕೆ ಮಾಡಿಕೊಂಡಿರುವ ಪ್ರಕರಣದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ  ಪತ್ನಿ ಸಾರಾ ನೆತನ್ಯಾಹು ದೋಷಿ ಎಂದು ಭಾನುವಾರ ಕೋರ್ಟ್ ತೀರ್ಪು ನೀಡಿದೆ.




ಪ್ರಧಾನಿ ಅಧಿಕೃತ ನಿವಾಸದಲ್ಲಿ ಸಾರಾ ನೆತನ್ಯಾಹು , ವಿದ್ಯಾರ್ಥಿಗಳಿಗೆ ನೀಡುವ ಉಚಿತ ಆಹಾರ ಯೋಜನೆಯ ಸರ್ಕಾರಿ ಹಣದಿಂದ ಹೊರಗಿನಿಂದ ಆಹಾರವನ್ನು ಖರೀದಿಸಿದ್ದಾರೆ. ಸರ್ಕಾರಿ ಹಣ ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.


ಇದೀಗ ಅವರು  ತನ್ನ ತಪ್ಪನ್ನು ಒಪ್ಪಿಕೊಂಡು, ಕಡಿಮೆ ಶಿಕ್ಷೆ ವಿಧಿಸಲು ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಈ ಪ್ರಕರಣದಲ್ಲಿ ಕೋರ್ಟ್ ಸಾರಾ ನೆತನ್ಯಾಹುಗೆ  ರೂ. 2. 25 ಲಕ್ಷ ದಂಡ ವಿಧಿಸಿದೆ. ದಂಡ ಸೇರಿದಂತೆ ದುರ್ಬಳಕೆಯ ಒಟ್ಟು ಹಣವನ್ನು 9 ಕಂತುಗಳಲ್ಲಿ ಪಾವತಿ ಮಾಡಬೇಕು ಎಂದು ಕೋರ್ಟ್‌ ಆದೇಶಿಸಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಮೈತ್ರಿ ಸರಕಾರಕ್ಕೆ ಎಚ್ಚರಿಕೆ ನೀಡಿದ ಕಾಂಗ್ರೆಸ್ ಶಾಸಕ