Select Your Language

Notifications

webdunia
webdunia
webdunia
webdunia

ಅಬುಧಾಬಿಯಲ್ಲಿ ನೆಲೆಸಿರುವ ಭಾರತೀಯರಿಗೊಂದು ಸಿಹಿಸುದ್ದಿ

ಅಬುಧಾಬಿಯಲ್ಲಿ ನೆಲೆಸಿರುವ ಭಾರತೀಯರಿಗೊಂದು ಸಿಹಿಸುದ್ದಿ
ಅಬುಧಾಬಿ , ಸೋಮವಾರ, 11 ಫೆಬ್ರವರಿ 2019 (06:37 IST)
ಅಬುಧಾಬಿ : ಅಬುಧಾಬಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ನೆಲೆಸಿರುವ  ಕಾರಣದಿಂದ ಅಲ್ಲಿನ ನ್ಯಾಯಾಲಯಗಳಲ್ಲಿ ಹಿಂದಿಯನ್ನು ತೃತೀಯ ಭಾಷೆಯಾಗಿ ಸೇರ್ಪಡೆ ಮಾಡಲಾಗಿದೆ.


ಯುನೈಟೆಡ್ ಅರಬ್ ಎಮಿರೇಟ್ಸ್ ನ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 30 ರಷ್ಟು ಮಂದಿ ಭಾರತೀಯರು ವಿವಿಧ ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲದೇ ಅಬುಧಾಬಿಯಲ್ಲಿ ಅರೇಬಿಕ್ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ನ್ಯಾಯಾಂಗ ಈವರೆಗೆ ಕಾರ್ಯ ನಿರ್ವಹಿಸುತ್ತಿತ್ತು.


ಆದರೆ ಸಮಸ್ಯೆಗಳು ತಲೆದೋರಿದ ಸಂದರ್ಭದಲ್ಲಿ ನೆಲದ ಕಾನೂನನ್ನು ಅರಿಯಲು ಜನರಿಗೆ ಸಹಾಯಕವಾಗಲಿ ಎಂಬ ಕಾರಣಕ್ಕೆ ಹಿಂದಿ ಭಾಷೆಯನ್ನು ನ್ಯಾಯಾಲಯಗಳಲ್ಲಿ ಮೂರನೇ ಅಧಿಕೃತ ಭಾಷೆಯನ್ನಾಗಿ ಸೇರ್ಪಡೆ ಮಾಡಲಾಗಿದೆ. ಶನಿವಾರದಂದು ಅಬುಧಾಬಿ ನ್ಯಾಯಾಂಗ ಇಲಾಖೆ ಈ ಕುರಿತ ಸೂಚನೆಯನ್ನು ಹೊರಡಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಆನ್‍ಲೈನ್ ಅಪ್ಲಿಕೇಷನ್ ಮೂಲಕ ಕೆಲಸ ಹುಡುಕುತ್ತಿರುವ ಯುವತಿಯರೇ ಎಚ್ಚರ