Select Your Language

Notifications

webdunia
webdunia
webdunia
webdunia

ನಿಕಾ-ಹಲಾಲ್ ಗೆ ಬಲವಂತಪಡಿಸಿದ ಪತಿಯ ವಿರುದ್ಧ ದೂರು ದಾಖಲಿಸಿದ ಮಹಿಳೆ

ನಿಕಾ-ಹಲಾಲ್ ಗೆ ಬಲವಂತಪಡಿಸಿದ ಪತಿಯ ವಿರುದ್ಧ ದೂರು ದಾಖಲಿಸಿದ ಮಹಿಳೆ
ಬರೇಲಿ , ಶುಕ್ರವಾರ, 8 ಫೆಬ್ರವರಿ 2019 (10:24 IST)
ಬರೇಲಿ : ಬರೇಲಿಯಲ್ಲಿ ಮಹಿಳೆಯೊಬ್ಬಳಿಗೆ ಆಕೆಯ ಪತಿ ನಿಕಾ-ಹಲಾಲ್ ಗೆ ಬಲವಂತಪಡಿಸಿದ ಹಿನ್ನಲೆಯಲ್ಲಿ ಆಕೆ ತನ್ನ ಪತಿ ಹಾಗೂ ಕುಟುಂಬದವದರ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾಳೆ.


ಸಂತ್ರಸ್ತ ಮಹಿಳೆ ಕಿಲ್ಲ ನಿವಾಸಿಯಾಗಿದ್ದು, ಈಕೆಗೆ ಜುಲೈ 5 2009ರಲ್ಲಿ ಮದುವೆಯಾಗಿತ್ತು. ಆದರೆ ಮದುವೆಯಾದ 2 ವರ್ಷದ ಬಳಿಕ ಆಕೆಗೆ ಮಕ್ಕಳಾಗದ ಕಾರಣ ಪತಿ ಹಾಗೂ ಆತನ ಕುಟುಂಬದವರು ಆಕೆಗೆ ಕಿರುಕುಳ ನೀಡುತ್ತಿದ್ದರು.  ನಂತರ ಡಿಸೆಂಬರ್ 15, 2011ರಂದು ಆಕೆಗೆ ವಿಚ್ಛೇದನ ಕೂಡ ನೀಡಲಾಗಿತ್ತು. ಆದರೆ ಆಕೆಯ ಕುಟುಂಬದವರ ಒತ್ತಾಯದ ಮೇರೆಗೆ ಮತ್ತೆ ಆಕೆಯನ್ನು ಮದುವೆಯಾಗಲು ಒಪ್ಪಿದ ಆತ ತನ್ನ ಪತ್ನಿಗೆ ತನ್ನ ತಂದೆಯ ಜೊತೆ ಹಲಾಲ್ ಗೆ ಒಳಗಾಗುವಂತೆ ಹೇಳಿದ್ದಾನೆ. ಇದಕ್ಕೆ ಮಹಿಳೆ  ನಿರಾಕರಿಸದ್ದಕ್ಕೆ ಮತ್ತು ಬರುವ ಇಂಜೆಕ್ಷನ್ ನೀಡಿ ಆಕೆಯ ಮಾವನಿಂದಲೇ ಆಕೆಯ ಮೇಲೆ ಅತ್ಯಾಚಾರ ಮಾಡಿಸಿ ಮತ್ತೆ ತಲಾಕ್ ನೀಡಿದ್ದಾನೆ.


ಇಷ್ಟಕ್ಕೆ ಸುಮ್ಮನಾಗದ ಪಾಪಿ ಪತಿ ಮತ್ತೆ ತನ್ನ ಕಿರಿಯ ಸಹೋದರನ ಜೊತೆ  ಹಲಾಲ್ ಗೆ ಒಳಗಾಗುವಂತೆ ಒತ್ತಾಯಿಸಿದ್ದಾನೆ. ಇದರಿಂದ ಬೇಸತ್ತ ಆಕೆ ತನ್ನ ಪತಿ ಹಾಗೂ ಕುಟುಂಬದವದರ ವಿರುದ್ಧ ಕಿಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನಲೆಯಲ್ಲಿ ಆರೋಪಿಗಳ ವಿರುದ್ಧ ಸೆಕ್ಷನ್ 498ಎ,377, 376, 323, 328, 511 ಹಾಗೂ ಐಐಸಿಯ 120ಬಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಮಂಗಳವಾರ ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸಿದ್ದು, ಇದರ ಮುಂದಿನ ವಿಚಾರಣೆಯನ್ನು ಫೆ.15ಕ್ಕೆ ನಿಗದಿಪಡಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದ ಬಜೆಟ್ ಮಂಡನೆ