7 ವರ್ಷದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಕಾಮುಕರು

ಭಾನುವಾರ, 3 ಫೆಬ್ರವರಿ 2019 (07:24 IST)
ಚಂಡೀಗಢ : ಮೂವರು ಕಾಮುಕರು ಸೇರಿ 7 ವರ್ಷದ ಬಾಲಕಿಯನ್ನು ಅಪಹರಿಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಹರಿಯಾಣದ ರೋಹ್ಟಕ್ ಪ್ರದೇಶದ ರೈಲ್ವೇ ಯಾರ್ಡ್ ಬಳಿ ನಡೆದಿದೆ.

ಗುರುವಾರ ಸಂಜೆ ವೇಳೆ ರೈಲ್ವೇ ಯಾರ್ಡ್ ಬಳಿ ನಡೆದು ಹೋಗುತ್ತಿದ್ದ ಬಾಲಕಿಯನ್ನು ಮೂವರು ಕಾಮುಕರು ಸೇರಿ ಅಪಹರಿಸಿ, ರಾತ್ರಿ ವೇಳೆ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ದಾರಿ ಮೇಲೆಯೇ ಬಿಟ್ಟು ಹೋಗಿದ್ದಾರೆ. ನಂತರ ಹೇಗೋ ಮನೆ ತಲುಪಿದ ಬಾಲಕಿ ನಡೆದ ಘಟನೆಯ ಬಗ್ಗೆ ಪೋಷಕರಿಗೆ ತಿಳಿಸಿದ್ದಾಳೆ.

 

ತಕ್ಷಣ ಬಾಲಕಿಯ ತಂದೆ ಆರೋಪಿಗಳ ವಿರುದ್ಧ ರೋಹ್ಟಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪತ್ನಿಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಸ್ನೇಹಿತನನ್ನು 16 ಬಾರಿ ಇರಿದು ಕೊಂದ