ಭೋಪಾಲ್ : ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ. ಅದಕ್ಕೆ ಒಂದು ಹಿಡಿ ಅನ್ನ ಹಾಕಿದರೆ ಅದು ಅನ್ನ ಹಾಕಿದವರ ರಕ್ಷಣೆ ಮಾಡುತ್ತದೆ ಎಂಬುದಕ್ಕೆ ಚೋಲಾ ಪ್ರದೇಶದಲ್ಲಿ ನಡೆದ ಈ ಘಟನೆಯೇ ಸಾಕ್ಷಿ.
ಹೌದು. 29 ವರ್ಷದ ಮಹಿಳೆಯಬ್ಬಳು ಭಾನುವಾರ ಮಧ್ಯಾಹ್ನ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಕುಡಿದ ಅಮಲಿನಲ್ಲಿದ್ದ ನೆರೆಮನೆಯ ವ್ಯಕ್ತಿಯೊಬ್ಬ ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದ್ದಾನೆ. ಆಗ ಮಹಿಳೆಯ ಕಿರುಚಾಟ ಕೇಳಿ ಅಲ್ಲೇ ಮಲಗಿದ್ದ ಬೀದಿ ನಾಯಿಯೊಂದು ಮನೆಯೊಳಗೆ ಓಡಿ ಬಂದು ಕಾಮುಕನ ಮೇಲೆ ದಾಳಿ ಮಾಡಿದೆ. ಹೆದರಿದ ಆತ ನಾಯಿಗೆ ಚಾಕುವಿನಿಂದ ತಿವಿದು ಅಲ್ಲಿಂದ ಓಡಿ ಹೋಗಿದ್ದಾನೆ.
ಈ ಘಟನೆಗೆ ಸಂಬಂಧಿಸಿದಂತೆ ಮಹಿಳೆ ಆರೋಪಿಯ ವಿರುದ್ಧ ಚೋಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪರಾರಿಯಾದ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಚೂರಿ ಇರಿತಕ್ಕೊಳಗಾದ ನಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಾಯಿ ಮಹಿಳೆಯ ಮನೆಯ ಪಕ್ಕದಲ್ಲಿ ಇರುತ್ತಿದ್ದ ಹಿನ್ನಲೆಯಲ್ಲಿ ಆಕೆ ಪ್ರತಿದಿನ ಅದಕ್ಕೆ ಅನ್ನ ಹಾಕುತ್ತಿದ್ದಳು ಎಂಬುದಾಗಿ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.