ಫ್ಯಾಶನ್ ಶೋ ವೇದಿಕೆಯಲ್ಲಿ ನಾಯಿಯದ್ದೇ ಕಾರುಬಾರು!

ಶುಕ್ರವಾರ, 18 ಜನವರಿ 2019 (09:17 IST)
ಮುಂಬೈ: ಫ್ಯಾಶನ್ ಶೋ ಒಂದರಲ್ಲಿ ಖ್ಯಾತ ಮಾಡೆಲ್ ಗಳು ವೇದಿಕೆ ಮೇಲೆ ಹೆಜ್ಜೆ ಹಾಕುತ್ತಿದ್ದರೆ ಬೀದಿ ನಾಯಿಯೊಂದು ಜತೆಯಾದ ಘಟನೆ ಮುಂಬೈಯಲ್ಲಿ ನಡೆದಿದೆ.


ಮುಂಬೈಯಲ್ಲಿ ನಡೆದ ರೋಹಿತ್ ಬಲ ಅವರ ಬ್ಲೆಂಡರ್ಸ್ ಪ್ರೈಡ್ ಫ್ಯಾಶನ್ ಟೂರ್ 2018 ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಮಾಡೆಲ್ ಗಳಾಗಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಡಿಯಾನ ಪೆಂಟಿ ಹೆಜ್ಜೆ ಹಾಕುತ್ತಿದ್ದರು.

ಈ ವೇಳೆ ಪಕ್ಕದಲ್ಲೇ ಬಂದ ಬೀದಿ ನಾಯಿ ವೇದಿಕೆ ಮೇಲೆ ಓಡಾಡಿ ಮಾಡೆಲ್ ಗಳಿಗಿಂತ ತನ್ನ ಮೇಲೇ ವೀಕ್ಷಕರು ಗಮನ ಕೇಂದ್ರೀಕರಿಸುವಂತೆ ಮಾಡಿತು. ಅಷ್ಟೇ ಅಲ್ಲ, ನಾಯಿ ಮಾಡೆಲ್ ಗಳ ಜತೆ ಸುತ್ತಾಡುವುದು ನೋಡಿ ನೆರೆದಿದ್ದವರು ನಗೆಗಡಲಲ್ಲಿ ತೇಲಾಡಿದರು. ಬಳಿಕ ಭದ್ರತಾ ಸಿಬ್ಬಂದಿಗಳು ನಾಯಿಯನ್ನು ಓಡಿಸಬೇಕಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರಾಕಿಂಗ್ ಸ್ಟಾರ್ ಯಶ್ ಹಾದಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್