Select Your Language

Notifications

webdunia
webdunia
webdunia
webdunia

Kuwait Fire: ಕುವೈತನ ಕಟ್ಟಡದಲ್ಲಿ ಅಗ್ನಿ ಆಕಸ್ಮಿಕ: ಭಾರತೀಯರು ಸೇರಿ 35 ಮಂದಿ ಸಜೀವ ದಹನ

Kuwait

Krishnaveni K

ಕುವೈತ್ , ಬುಧವಾರ, 12 ಜೂನ್ 2024 (16:16 IST)
ಕುವೈತ್: ಕುವೈತ್ ಕೇರಳ ಮೂಲದ ಉದ್ಯಮಿಗೆ ಸೇರಿದ ಕಟ್ಟಡವೊಂದರಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು ನಾಲ್ವರು ಭಾರತೀಯರು ಸೇರಿದಂತೆ 35 ಮಂದಿ ಸಜೀವ ದಹನವಾದ ಧಾರುಣ ಘಟನೆ ನಡೆದಿದೆ.

ದಕ್ಷಿಣ ಕುವೈತ್ ನ ಮುಂಗಾಫ್ ನಗರದಲ್ಲಿ ಘಟನೆ ನಡೆದಿದೆ. ಈ ಕಟ್ಟಡ ಕೇರಳ ಮೂಲದ ಮಲಯಾಳಿ ಉದ್ಯಮಿಯೊಬ್ಬರಿಗೆ ಸೇರಿದ್ದಾಗಿದೆ.  ಅಡುಗೆ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಕಟ್ಟಡದಲ್ಲಿದ್ದವರು ರಕ್ಷಿಸಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.

ಮೃತಪಟ್ಟವರಲ್ಲಿ ತಮಿಳುನಾಡಿನವರು, ಉತ್ತರ ಭಾರತೀಯರೂ ಸೇರಿದ್ದಾರೆ. ತಕ್ಷಣವೇ ಬೆಂಕಿ ನಂದಿಸುವ ಪ್ರಯತ್ನ ಮಾಡಲಾಗಿದೆ. ಆದರೆ ಘಟನೆಯಲ್ಲಿ ಹಲವಾರು ಮಂದಿ ಸಾವನ್ನಪ್ಪಿದ್ದಲ್ಲದೆ, ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಕಿಯ ಕೆನ್ನಾಲಗೆ ಕಂಡು ಭಯಗೊಂಡು ಕೆಲವರು ಕಟ್ಟಡದಿಂದ ಜಿಗಿದು ರಕ್ಷಿಸಿಕೊಳ್ಳಲು ಹೊರಟು ಸಾವನ್ನಪ್ಪಿದ್ದಾರೆ. ಮತ್ತೆ ಕೆಲವರು ಬೆಂಕಿಯಲ್ಲೇ ಸುಟ್ಟು ಕರಕಲಾಗಿದ್ದಾರೆ. ಈಗಿನ ಪರಿಸ್ಥಿತಿ ಪ್ರಕಾರ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನನಗೆ ಮೋದಿ ಥರಾ ದೇವರು ಸೂಚನೆ ಕೊಡ್ತಿಲ್ಲಪ್ಪಾ..: ರಾಹುಲ್ ಗಾಂಧಿ