ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ರಾಯ್ ಬರೇಲಿ ಮತ್ತು ವಯನಾಡಿನಲ್ಲಿ ಸ್ಪರ್ಧಿಸಿ ಎರಡೂ ಕ್ಷೇತ್ರಗಳಲ್ಲಿ ಗೆದ್ದ ರಾಹುಲ್ ಗಾಂಧಿ ಈಗ ಒಂದು ಕ್ಷೇತ್ರವನ್ನು ಬಿಟ್ಟು ಇನ್ನೊಂದನ್ನು ಆಯ್ಕೆ ಮಾಡುವ ಸಂದಿಗ್ಧದಲ್ಲಿದ್ದಾರೆ.
									
			
			 
 			
 
 			
					
			        							
								
																	ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಅವರು ನನಗೆ ಗೊತ್ತಾಗುತ್ತಿಲ್ಲಪ್ಪ.. ನನಗೆ ನರೇಂದ್ರ ಮೋದಿ ಥರಾ ದೇವರು ಏನೂ ಸೂಚನೆ ಕೊಡುತ್ತಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ. ಮಲಪ್ಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಪ್ರಧಾನಿ ಮೋದಿಯ ಈ ಹಿಂದಿನ ಹೇಳಿಕೆಗೆ ಈ ರೀತಿ ಟಾಂಗ್ ಕೊಟ್ಟಿದ್ದಾರೆ.
									
										
								
																	ಚುನಾವಣೆ ವೇಳೆ ಮೋದಿ ನನಗೆ ವಾರಣಾಸಿಯಿಂದ ಸ್ಪರ್ಧಿಸಲು ದೇವರೇ ಸೂಚನೆ ಕೊಟ್ಟಿದ್ದಾನೆ ಎಂದಿದ್ದರು. ಅದಕ್ಕೇ ಈಗ ರಾಹುಲ್ ಟಾಂಗ್ ಕೊಟ್ಟಿದ್ದಾರೆ. ನನ್ನ ಮುಂದೆ ರಾಯ್ ಬರೇಲಿ ಆಯ್ಕೆ ಮಾಡಲೋ, ವಯನಾಡನ್ನು ಆಯ್ಕೆ ಮಾಡಲು ಎಂಬ ಗೊಂದಲಗಳಿವೆ. ದುರದೃಷ್ಟವಶಾತ್ ನನಗೆ ನರೇಂದ್ರ ಮೋದಿ ಥರಾ ದೇವರು ಸೂಚನೆ ಕೊಡುತ್ತಿಲ್ಲ. ಯಾಕೆಂದರೆ ನಾನೊಬ್ಬ ಸಾಮಾನ್ಯ ಮನುಷ್ಯ ಎಂದು ಲೇವಡಿ ಮಾಡಿದ್ದಾರೆ.
									
											
							                     
							
							
			        							
								
																	ಮೋದಿ ಈ ಹಿಂದೆ ಸಂದರ್ಶನವೊಂದರಲ್ಲಿ ನನ್ನನ್ನು ದೇವರೇ ಜನ ಸೇವೆ ಮಾಡಲು ಕಳುಹಿಸಿದ್ದಾನೆ ಎಂದು ಅನಿಸುತ್ತಿದೆ. ನನಗೆ ದೇವರೇ ಕೆಲಸ ಮಾಡುವ ಶಕ್ತಿ ಕೊಡುತ್ತಿದ್ದಾನೆ ಎನಿಸುತ್ತಿದೆ ಎಂದಿದ್ದರು. ಅವರ ಈ ಹೇಳಿಕೆಯನ್ನೇ ರಾಹುಲ್ ಗಾಂಧಿ ಈಗ ಈ ರೀತಿ ತಮಾಷೆ ಮಾಡಿದ್ದಾರೆ.