ಮದುವೆಗಿಂತ ಮೊದಲು ಸೆಲ್ಫೀ ತೆಗೆದ ತಪ್ಪಿಗೆ ಭಾವೀ ಅಳಿಯ-ಮಗಳನ್ನೇ ಕೊಲೆ ಮಾಡಿದ ತಂದೆ!

ಮಂಗಳವಾರ, 4 ಡಿಸೆಂಬರ್ 2018 (10:30 IST)
ಕರಾಚಿ: ಮದುವೆಗಿಂತ ಮೊದಲೇ ಸೆಲ್ಫೀ ತೆಗೆಸಿಕೊಂಡ ತಪ್ಪಿಗೆ ಭಾವೀ ಅಳಿಯ ಮತ್ತು ಮಗಳನ್ನು ಮರ್ಯಾದೆ ಹೆಸರಿನಲ್ಲಿ ತಂದೆಯೇ ಕೊಲೆ ಮಾಡಿದ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ.

ವಿಶೇಷವೆಂದರೆ ಈ ಜೋಡಿಗೆ ವಿವಾಹ ನಿಶ್ಚಿತಾರ್ಥವೂ ಮುಗಿದಿತ್ತು. ಹಾಗಿದ್ದರೂ ಮದುವೆಗಿಂತ ಮೊದಲು ಭೇಟಿ ಮಾಡುವುದು, ಸೆಲ್ಫೀ ತೆಗೆಸಿಕೊಳ್ಳುವ ಮೂಲಕ ಈ ನವಜೋಡಿ ಸಂಪ್ರದಾಯ ಮೀರಿದೆ ಎಂದು ತಂದೆ ಮಗಳಿಗೆ ವಿಷವುಣಿಸಿದರೆ, ಭಾವೀ ಅಳಿಯನನ್ನು ಗುಂಡಿಕ್ಕಿ ಕೊಂದಿದ್ದಾನೆ.

ಬಳಿಕ ಮಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಳು ಎಂದು ಪೊಲೀಸ್ ವಿಚಾರಣೆ ವೇಳೆ ನಾಟಕವಾಡಿದ್ದಾನೆ. ಆದರೆ ಕೊಲೆಗೀಡಾದ ವಧುವಿನ ಆರೋಪಿ ತಂದೆ ವಿರುದ್ಧ ತಾಯಿಯೇ ಪೊಲೀಸರಿಗೆ ದೂರು ನೀಡಿದ್ದು, ಇದೀಗ ಆತನನ್ನು ಮತ್ತು ಆತನಿಗೆ ಸಹಾಯ ಮಾಡಿದ ತಾತನನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಂಬರೀಶ್ ಗೆ ಅಭಿಮಾನಿಗಳಿಂದಲೇ ತಿಥಿ ಕಾರ್ಯ!