Publish Date: Sun, 02 Dec 2018 (16:09 IST)
Updated Date: Sun, 02 Dec 2018 (16:10 IST)
ವಾಯುವಿಹಾರಕ್ಕೆ ಹೊರಟಿದ್ದ ಇಬ್ಬರು ಮಹಿಳೆಯರು ಕೊಲೆಗೀಡಾದ ಘಟನೆ ನಡೆದಿದೆ.
ವಾಯುವಿಹಾರಕ್ಕೆ ಹೊರಟಿದ್ದ ಇಬ್ಬರು ಮಹಿಳೆಯರನ್ನು ಮಾನಸಿಕ ಅಸ್ವಸ್ಥನೊಬ್ಬ ಕಟ್ಟಿಗೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದ ದಾರುಣ ಘಟನೆ ಬೀದರ್ ನಗರದ ಜನವಾಡಾ ರಸ್ತೆಯ ಲೇಬರ್ ಕಾಲೋನಿಯಲ್ಲಿ ಇಂದು ಮುಂಜಾನೆ ನಡೆದಿದೆ.
ಲೇಬರ್ ಕಾಲೋನಿಯ ಲಲಿತಮ್ಮ (45) ಮತ್ತು ಅವರ ನಾದಿನಿ ದುರ್ಗಮ್ಮ (50) ಕೊಲೆಯಾದ ಮಹಿಳೆಯರು.
ಬೆಳಿಗ್ಗೆ ಎಂದಿನಂತೆ ಲಲಿತಮ್ಮ ಮತ್ತು ದುರ್ಗಮ್ಮ ಅವರು ಕಾಲೋನಿಯಲ್ಲಿ ವಾಯುವಿಹಾರಕ್ಕೆ ಹೊರಟಿದ್ದಾಗ ಕಾಲೋನಿಯಲ್ಲಿರುವ ಹನುಮಾನ ಮಂದಿರದ ಬಳಿ ನಿಂತಿದ್ದ ಮಾನಸಿಕ ಅಸ್ವಸ್ಥನೊಬ್ಬ ಹನುಮಾನ ದೇವಸ್ಥಾನದೊಳಗೆ ಕಲ್ಲು ಮತ್ತು ಚಪ್ಪಲಿ ಎಸೆಯುತ್ತಿದ್ದುದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಕೋಪೇದ್ರಿಕ್ತನಾದ ಮಾನಸಿಕ ಅಸ್ವಸ್ಥ ಹನುಮಾನ ದೇವರ ಖಾಂಡಿಗೆಂದು ದೇವಸ್ಥಾನದ ಆವರಣದಲ್ಲಿ ತಂದು ಹಾಕಿದ್ದ ಕಟ್ಟಿಗೆ ತೆಗೆದುಕೊಂಡು ಲಲಿತಮ್ಮ ಅವರಿಗೆ ಮನಬಂದಂತೆ ಹೊಡೆದಿದ್ದಾನೆ. ಲಲಿತಮ್ಮ ಅವರಿಗೆ ಹೊಡೆಯುತ್ತಿರುವುದನ್ನು ಗಮನಿಸಿದ ದುರ್ಗಮ್ಮ ಬಡಿಸಲು ಹೋದಾಗ ಅವರಿಗೂ ಕಟ್ಟಿಗೆಯಿಂದ ಮನಬಂದಂತೆ ಹೊಡೆದು ಇಬ್ಬರನ್ನು ಸಾಯಿಸಿದ್ದಾನೆ.
ಸುದ್ದಿ ತಿಳಿದು ಲಲಿತಮ್ಮ ಅವರ ಮಗ ಮತ್ತು ಇನ್ನೊಬ್ಬ ವ್ಯಕ್ತಿ ಸ್ಥಳಕ್ಕೆ ಬಂದಾಗ ಲಲಿತಮ್ಮ ಅವರ ಮಗನಿಗೂ ಹೊಡೆಯಲು ಬೆನ್ನಟ್ಟಿದ್ದಾನೆ. ಲಲಿತಮ್ಮ ಅವರ ಮಗನೊಂದಿಗೆ ಬಂದಿದ್ದ ವ್ಯಕ್ತಿ ಚಿರಾಡಿದಾಗ ದೂರ ಸರಿದಿದ್ದಾನೆ. ಈ ಸಂಬಂಧ ಪೊಲೀಸರು ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ವಡಗೇರಾ ಗ್ರಾಮದ ದೇವಿಂದ್ರಪ್ಪ ಎಂಬಾತನನ್ನು ಬಂಧಿಸಿದ್ದಾರೆ.
Jagadeesh
Publish Date: Sun, 02 Dec 2018 (16:09 IST)
Updated Date: Sun, 02 Dec 2018 (16:10 IST)