Select Your Language

Notifications

webdunia
webdunia
webdunia
Saturday, 12 April 2025
webdunia

ನೀರು ಹಾಗೂ ವಿದ್ಯುತ್ ಉಳಿಸುವ ಪ್ರಯತ್ನಕ್ಕೆ ಮುಂದಾದ ದುಬೈ

ದುಬೈ
ದುಬೈ , ಗುರುವಾರ, 21 ಜೂನ್ 2018 (13:36 IST)
ದುಬೈ : ದುಬೈ ಜಲ ಹಾಗೂ ವಿದ್ಯುತ್ ಪ್ರಾಧಿಕಾರ (ದಿವಾ) ಅನಗತ್ಯವಾಗಿ  ಬಳಕೆಯಾಗುತ್ತಿರುವ ನೀರು ಹಾಗೂ ವಿದ್ಯುತ್ ನ್ನು ಉಳಿಸುವ ಪ್ರಯತ್ನಕ್ಕೆ ಮುಂದಾಗಿದೆ.


ಯುಎಇ ನ ಬಿಸಿಲಿನ ತಾಪಕ್ಕೆ ತತ್ತರಿಸಿದ ಜನರು ಅತಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉಪಕರಣಗಳು ಹಾಗೂ ಜಲಸಂಪನ್ಮೂಲಗಳನ್ನು ಬಳಸುತ್ತಿರುವ ಹಿನ್ನಲೆಯಲ್ಲಿ ವಾಟರ್ ಹೀಟರ್, ಇಲೆಕ್ಟ್ರಿಕಲ್ ಓವನ್, ಇಸ್ತ್ರಿಪೆಟ್ಟಿಗೆ ಮುಂತಾದ ಉಪಕರಣಗಳ ಉಪಯೋಗವನ್ನು ಕಡಿಮೆಗೊಳಿಸಿ ಬೇಸಿಗೆಯಲ್ಲಿ ಅಗತ್ಯವಾಗಿ ಬೇಕಾದ ಉಪಕರಣಗಳನ್ನು ಮಾತ್ರ ಬಳಸುವಂತೆ ಜನರಿಗೆ  ಮಾರ್ಗದರ್ಶನ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.


ಈ ಹಿಂದೆಯೂ ಕೂಡ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ದಿವಾ ಅದರಲ್ಲಿ ಯಶಸ್ಸು ಸಾಧಿಸಿದ್ದು, ಈ ಮೂಲಕ 2009ರಿಂದ 2017ರವರೆಗಿನ ಅವಧಿಯಲ್ಲಿ 1.66 ಟೆರಾವ್ಯಾಟ್ ವಿದ್ಯುತ್ ಹಾಗೂ 666 ಕೋಟಿ ಗ್ಯಾಲನ್ ನೀರು ಸಂರಕ್ಷಿಸಲು ಈ ಅಭಿಯಾನದಿಂದ ಸಾಧ್ಯವಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಉಗ್ರರ ಮೇಲೆ ಕಠಿಣ ಕ್ರಮ ; ಕೇಂದ್ರ ಸರ್ಕಾರ ನಿರ್ಧಾರ