Publish Date: Thu, 21 Jun 2018 (13:32 IST)
Updated Date: Thu, 21 Jun 2018 (13:34 IST)
ನವದೆಹಲಿ : ಬಿಜೆಪಿ ಜಮ್ಮುಕಾಶ್ಮೀರದಲ್ಲಿ ಪಿಡಿಪಿ ಜೊತೆಗಿನ ಮೈತ್ರಿಯನ್ನು ಕಳಚಿಕೊಂಡ ನಂತರ ಕೇಂದ್ರ ಸರ್ಕಾರ ಕಠಿಣ ನಿರ್ಧಾರವೊಂದನ್ನು ತೆಗೆದುಕೊಂಡಿದೆ.
ಹೌದು. ಕೇಂದ್ರ ಬಿಜೆಪಿ ಸರ್ಕಾರ ಉಗ್ರರನ್ನು ಹುಡುಕಿ ಹತ್ಯೆ ಮಾಡುವಂತಹ ಕಠಿಣ ನಿರ್ಧಾರಕ್ಕೆ ಬಂದಿದೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಜಮ್ಮುಕಾಶ್ಮೀರ ಬಿಜೆಪಿ ಉಸ್ತುವಾರಿ ರಾಮ್ ಮಾಧವ ಅವರು,’ ಉಗ್ರರ ಬಗ್ಗೆ ಕರುಣೆ ತೋರಲ್ಲ, ಭಯೋತ್ಪಾದಕರ ಮೇಲೆ ಬಿಜೆಪಿ ಯಾವುದೇ ರೀತಿಯ ಕರುಣೆ ತೋರಿಸುವುದಿಲ್ಲ. ಪ್ರತ್ಯೇಕವಾದಿ ಸಂಘಟನೆ ಹುರಿಯತ್ ಕಾನ್ಫರೆನ್ಸ್ ಸೇರಿದಂತೆ ಎಲ್ಲರ ಜೊತೆಗೂ ಮಾತುಕತೆಗೆ ಬಿಜೆಪಿ ಸಿದ್ಧವಿದೆ. ಆದರೆ ಅದಕ್ಕೂ ಮೊದಲು ಭಯೋತ್ಪಾದನೆಗೆ ಬೆಂಬಲ ನೀಡುವುದು ನಿಲ್ಲಬೇಕು. ಹಿಂಸಾಚಾರ ಕೊನೆಗೊಳ್ಳಬೇಕು’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ