Select Your Language

Notifications

webdunia
webdunia
webdunia
webdunia

ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಗೆ ಅವಮಾನ ಮಾಡಿ ದರ್ಶನ ಕೊಟ್ಟ ಡೊನಾಲ್ಡ್ ಟ್ರಂಪ್

Trump-Shehbaz-Asif Munir

Krishnaveni K

ನ್ಯೂಯಾರ್ಕ್ , ಶುಕ್ರವಾರ, 26 ಸೆಪ್ಟಂಬರ್ 2025 (11:55 IST)
Photo Credit: X
ನ್ಯೂಯಾರ್ಕ್: ತಮ್ಮನ್ನು ನೋಡಲು ಬಂದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಗೆ ಬಾಗಿಲಿನಲ್ಲೇ ನಿಲ್ಲಿಸಿ ಅವಮಾನ ಮಾಡಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊನೆಗೂ ದರ್ಶನ ಕೊಟ್ಟಿದ್ದಾರೆ.

ಪಾಕ್ ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್ ಬಳಿಕ ಇದೀಗ ಪಾಕ್ ಪ್ರಧಾನಿ ಶೆಹಬಾಜ್ ಅಮೆರಿಕಾ ಅಧ್ಯಕ್ಷರ ಭೇಟಿಗೆ ತೆರಳಿದ್ದಾರೆ. ಆದರೆ ಟ್ರಂಪ್ ಅಷ್ಟು ಸುಲಭವಾಗಿ ಪಾಕ್ ಪ್ರಧಾನಿ ಕೈಗೆ ಸಿಗಲಿಲ್ಲ. ಟ್ರಂಪ್ ಗಾಗಿ ಪಾಕ್ ಪ್ರಧಾನಿ ತಮ್ಮ ಅಧಿಕಾರಿಗಳೊಂದಿಗೆ ಗಂಟೆ ಗಟ್ಟಲೆ ಕಾದು ಕುಳಿತರು.

ರಷ್ಯಾ ಜೊತೆಗೆ ಭಾರತದ ಸ್ನೇಹದಿಂದ ಹೊಟ್ಟೆ ಉರಿದುಕೊಂಡಿರುವ ಅಮೆರಿಕಾ, ಪಾಕಿಸ್ತಾನದ ಜೊತೆಗೆ ಭಾರೀ ದೋಸ್ತಿ ಪ್ರದರ್ಶನ ಮಾಡುತ್ತಿದೆ. ಆಪರೇಷನ್ ಸಿಂಧೂರ್ ನಡೆದ ಕೆಲವೇ ದಿನಗಳಲ್ಲಿ ಪಾಕ್ ಸೇನಾ ಮುಖ್ಯಸ್ಥ ಅಮೆರಿಕಾಗೆ ಭೇಟಿ ನೀಡಿದ್ದರು. ಇದು ಭಾರತದ ಅಸಮಾಧಾನಕ್ಕೆ ಕಾರಣವಾಗಿತ್ತು.

ಇದೀಗ ಪಾಕ್ ಪ್ರಧಾನಿ ಶೆಹಬಾಜ್ ಭೇಟಿ ನೀಡಿದ್ದು ಪ್ರಾದೇಶಿಕ ಭದ್ರತೆ, ಅಫ್ಘಾನಿಸ್ತಾನದಲ್ಲಿನ ಅಸ್ಥಿರತೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆ ಕುರಿತು ಚರ್ಚೆ ನಡೆಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ