Select Your Language

Notifications

webdunia
webdunia
webdunia
webdunia

ನೊಬೆಲ್ ಪ್ರಶಸ್ತಿಗಾಗಿ ಗೋಗರೆಯುತ್ತಿರುವ ಡೊನಾಲ್ಡ್ ಟ್ರಂಪ್: ಪ್ರಶಸ್ತಿಗಾಗಿ ಹೀಗೂ ಹೇಳ್ತಾರಾ

Donald Trump

Krishnaveni K

ನ್ಯೂಯಾರ್ಕ್ , ಶುಕ್ರವಾರ, 3 ಅಕ್ಟೋಬರ್ 2025 (09:43 IST)
ನ್ಯೂಯಾರ್ಕ್: ನೊಬೆಲ್ ಪ್ರಶಸ್ತಿಗಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೋಗೆರೆಯುತ್ತಿದ್ದಾರೆ. ಪ್ರಶಸ್ತಿ ತನಗೇ ಸಿಗಬೇಕೆಂದು ಹೀಗೆಲ್ಲಾ ಹೇಳ್ತಾರಾ ಎಂದು ಜನರೇ ಒಳಗೊಳಗೇ ನಗುವಂತೆ ಹೇಳಿಕೆ ನೀಡುತ್ತಿದ್ದಾರೆ.

ನಾನು ನೊಬೆಲ್ ಪ್ರಶಸ್ತಿಗೆ ಅರ್ಹ. ಈ ಬಾರಿ ನನಗೆ ಪ್ರಶಸ್ತಿ ಕೊಡಲೇಬೇಕು. ನನಗೆ ನೊಬೆಲ್ ಪ್ರಶಸ್ತಿ ಕೊಡದೇ ಇದ್ದರೆ ಅದು ಅಮೆರಿಕಾಗೇ ಮಾಡುವ ಅವಮಾನ ಎಂದು ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ನೋಡುತ್ತಿದ್ದರೆ ಒಂದು ಪ್ರಶಸ್ತಿಗಾಗಿ ಆತ್ಮಗೌರವವನ್ನೂ ಬಿಟ್ಟು ಜನ ಹೀಗೆಲ್ಲಾ ಗೋಗೆರೆಯುತ್ತಾರಾ ಎಂದು ನಿಮಗೇ ಅಚ್ಚರಿಯಾಗಬಹುದು.

ಭಾರತ, ಪಾಕಿಸ್ತಾನ ಯುದ್ಧವನ್ನು ನಾನೇ ನಿಲ್ಲಿಸಿದ್ದು ಎಂದು ಹೋದಲ್ಲೆಲ್ಲಾ ಹೇಳಿಕೊಂಡು ತಿರುಗಾಡುತ್ತಿರುವ ಟ್ರಂಪ್ ಈಗ ಪ್ರಪಂಚದಲ್ಲಿ ಒಟ್ಟು 7 ಯುದ್ಧಗಳನ್ನು ನಿಲ್ಲಿಸಿದ್ದೇನೆ. ಹೀಗಾಗಿ ನಾನು ಶಾಂತಿ ದೂತ. ಅದಕ್ಕಾಗಿ ನನಗೆ ನೊಬೆಲ್ ಪ್ರಶಸ್ತಿ ಕೊಡಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ.

ಇದೀಗ ಇಸ್ರೇಲ್ ಗಾಜಾ ಸಂಘರ್ಷ ಕೊನೆಗೊಳಿಸಲು 20 ಅಂಶಗಳ ಯೋಜನೆ ಘೋಷಿಸಿದ ಬಳಿಕ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಇದನ್ನೂ ಸೇರಿಸಿ ನಾನು 8 ಯುದ್ಧಗಳನ್ನು ಕೊನೆಗೊಳಿಸಿದಂತಾಗಿದೆ. ಏನನ್ನೂ ಮಾಡದವರಿಗೂ ನೊಬೆಲ್ ಪ್ರಶಸ್ತಿ ಕೊಡುತ್ತಾರೆ. ಪುಸ್ತಕ ಬರೆದವರಿಗೂ ಕೊಡುತ್ತಾರೆ. ನಾನು ಇಷ್ಟು ಯುದ್ಧಗಳನ್ನು ನಿಲ್ಲಿಸಿದ್ದೇನೆ, ನನಗೆ ಪ್ರಶಸ್ತಿ ಕೊಡಲೇಬೇಕು ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತಕ್ಕೆ ಅವಮಾನವಾಗಲು ನಾವು ಬಿಡಲ್ಲ ಎಂದ ರಷ್ಯಾ ಅಧ್ಯಕ್ಷ ಪುಟಿನ್: ಟ್ರಂಪ್ ಗೂ ಚಾಟಿಯೇಟು