ಫೋನ್ ಪಾಸ್‍ ವರ್ಡ್ ಕೊಡಲ್ಲ ಎಂದ ಪತಿಗೆ ಪತ್ನಿ ಮಾಡಿದ್ದೇನು ಗೊತ್ತಾ?

ಭಾನುವಾರ, 20 ಜನವರಿ 2019 (07:14 IST)
ಇಂಡೋನೇಷಿಯಾ : ಫೋನ್ ಪಾಸ್‍ ವರ್ಡ್ ಕೊಡಲು ನಿರಾಕರಿಸಿದ ಪತಿಗೆ ಪತ್ನಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆ ಇಂಡೋನೇಷ್ಯಾದ ಪಶ್ಚಿಮ ನುಸಾ ಟೆಂಗ್ಗಾರ ಪ್ರಾಂತ್ಯದಲ್ಲಿ ನಡೆದಿದೆ.

ದೀದಿ ಪೂರ್ನಾಮ (26) ಮೃತ ದುರ್ದೈವಿ. ಇಲ್ಹಾಮ್ ಕಹ್ಯಾನಿ(25) ಕೊಲೆ ಮಾಡಿರುವ ಪತ್ನಿ. ಶನಿವಾರ ಪತಿ ಕೆಲಸ ಮಾಡುತ್ತಿದ್ದ ವೇಳೆ ಪತ್ನಿ ಆತನ ಫೋನ್ ತೆಗೆದುಕೊಂಡು ಅದನ್ನು ಓಪನ್ ಮಾಡಲು ಆಗದೆ ಪಾಸ್‍ ವರ್ಡ್ ಕೇಳಿದ್ದಾಳೆ. ಆಗ ಪತಿ ಪಾಸ್‍ ವರ್ಡ್ ನೀಡಲು ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಆಕೆ ಜಗಳವಾಡಲು ಶುರು ಮಾಡಿದ್ದಾಳೆ. ಬಳಿಕ ಜಗಳ ತಾರಕಕ್ಕೆ ಏರಿ ಪೂರ್ನಾಮ ಪತ್ನಿಗೆ ಹೊಡೆದಿದ್ದಾನೆ.

 

ಇದರಿಂದ ಇನ್ನಷ್ಟು ಕೋಪಗೊಂಡ ಆಕೆ ಪಕ್ಕದಲ್ಲೇ ಇದ್ದ ಪೆಟ್ರೋಲ್ ಬಾಟಲ್ ಎತ್ತಿಕೊಂಡು ಪತಿಯ ಮೇಲೆ ಸುರಿದು ಬೆಂಕಿ ಹಚ್ಚಿದ್ದಾಳೆ. ಪತಿಯ ಕಿರುಚಾಟ ಕೇಳಿ ಓಡಿಬಂದ ಸ್ಥಳೀಯರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

 

ಬೆಂಕಿ ಹಚ್ಚಿದ ಪರಿಣಾಮ ಪೂರ್ನಾಮನ ಅರ್ಧ ದೇಹ ಸಂಪೂರ್ಣ ಸುಟ್ಟುಹೋಗಿದ್ದು, ಎರಡು ದಿನದ ಬಳಿಕ ಆತ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಸಾವನಪ್ಪಿದ್ದಾನೆ. ಸದ್ಯಕ್ಕೆ ಪೊಲೀಸರು ಪತ್ನಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆಕೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಆಂಡ್ರಾಯ್ಡ್ ಬಳಕೆದಾರರಿಗಾಗಿ ಜಿಯೋ ಬಿಡುಗಡೆ ಮಾಡಿದೆ ಈ ಹೊಸ ಆಪ್