ಪ್ರೀತಿಯಲ್ಲಿ ನೊಂದ ಭಗ್ನಪ್ರೇಮಿ ಮಾಡಿದ್ದೇನು ಗೊತ್ತೇ?

ಸೋಮವಾರ, 31 ಡಿಸೆಂಬರ್ 2018 (06:58 IST)
ಬ್ಯಾಂಕಾಕ್ :  ಪ್ರೀತಿಯಲ್ಲಿ ನೊಂದ ಭಗ್ನ ಪ್ರೇಮಿಯೊಬ್ಬ ಮಾಜಿ ಪ್ರೇಯಸಿ ಹಾಗೂ ಸೆಕ್ಯುರಿಟಿ ಗಾರ್ಡ್ ನ್ನು ಶೂಟ್ ಮಾಡಿ ತಾನು ಶೂಟ್ ಮಾಡಿಕೊಂಡು ಸಾವನಪ್ಪಿದ ಘಟನೆ ತೈಲ್ಯಾಂಡ್‍ನ ಲ್ಯಾಂಪಂಗ್ ಪ್ರಾಂತ್ಯದಲ್ಲಿ ನಡೆದಿದೆ.


ಮೃತಪಟ್ಟವರನ್ನು ಡಾಮ್ರೊಂಗ್ಚಾಯ್ ಮೊನೊಥಾಮ್(39), ಆತನ ಮಾಜಿ ಪ್ರೇಯಸಿ ಬೂನಿಪೋರ್ನ್ ಕಂತಲಾಹ್(21) ಹಾಗೂ ಸೆಕ್ಯುರಿಟಿ ಗಾರ್ಡ್ ಮೆರಪೊಂಗ್ ಮೋರ್ಪಾ(28) ಎಂದು ಗುರುತಿಸಲಾಗಿದೆ. ಡಾಮ್ರೊಂಗ್ಚಾಯ್ ಹಾಗೂ ಬೂನಿಪೋರ್ನ್ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತಿದ್ದರು. ಆದರೆ ಅವರಿಬ್ಬರ ನಡುವೆ ಮನಸ್ತಾಪ ಉಂಟಾದ ಕಾರಣ ಇಬ್ಬರು ದೂರವಾಗಿದ್ದರು. ಈ ಘಟನೆಯಿಂದ  ಡಾಮ್ರೊಂಗ್ಚಾಯ್ ತುಂಬಾ ನೋವನುಭವಿಸುತ್ತಿದ್ದರೆ, ಬೂನಿಪೋರ್ನ್ ಮಾತ್ರ ಎಲ್ಲವನ್ನು ಮರೆತು ಸ್ನೇಹಿತರೊಡನೆ ಪಾರ್ಟಿ ಮಾಡಿಕೊಂಡು ಖುಷಿಯಾಗಿದ್ದಳು.


ಇದರಿಂದ ಕೋಪಗೊಂಡ ಡಾಮ್ರೊಂಗ್ಚಾಯ್ ಬೂನಿಪೋರ್ನ್ ಸ್ನೇಹಿತರೊಡನೆ ಪಾರ್ಟಿಗೆಂದು ತೆರಳಿದ್ದ ವೇಳೆ ಏಕಾಏಕಿ ಆಕೆಯ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಬಳಿಕ ಆಕೆಯನ್ನು ರಕ್ಷಿಸಲು ಬಂದ ಸೆಕ್ಯುರಿಟಿ ಗಾರ್ಡ್‍ಗೆ ಕೂಡ ಗುಂಡು ಹೊಡೆದು ಕೊಂದಿದ್ದಾನೆ. ತದನಂತರ ತಾನು ಕೂಡ ಶೂಟ್ ಮಾಡಿಕೊಂಡು ಮೃತಪಟ್ಟಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೋತಿಗೆ ಲೈಂಗಿಕ ಕಿರುಕುಳ ನೀಡಿದ ಮಹಿಳೆಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದ ಈಜಿಪ್ಟಿನ ಕೋರ್ಟ್