Publish Date: Sat, 22 Dec 2018 (06:44 IST)
Updated Date: Sat, 22 Dec 2018 (06:46 IST)
ಒಡಿಶಾ : ಪ್ರೀತಿಸಿದವನ ಬಿಟ್ಟು ಬೇರೆಯವರ ಜೊತೆ ಮದುವೆ ನಿಶ್ಚಯ ಮಾಡಿಕೊಂಡಿದ್ದಕ್ಕೆ ಕೋಪಗೊಂಡ ಪ್ರಿಯತಮ ಪ್ರೇಯಸಿಯ ತಲೆ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ.
ಸಸ್ಮಿತಾ ಬಿಸ್ವಾಲ್ ಪ್ರಿಯತಮನಿಂದಲೇ ಕೊಲೆಯಾದ ಯುವತಿ. ಯುಧಿಸ್ಠಿರ್ ಕೊಲೆ ಮಾಡಿದ ಆರೋಪಿ. ಆರೋಪಿ ಯುಧಿಸ್ಠಿರ್ ಪ್ರೇಯಸಿಯ ಮನೆ ಸಮೀಪದ ಏರಿಯಾದಲ್ಲಿ ವಾಸಿಸುತ್ತಿದ್ದು, ಇಬ್ಬರು ಪ್ರೀತಿಸುತ್ತಿದ್ದರು. ಆದರೆ ಆಕೆಗೆ ಬೇರೆಯವರ ಜೊತೆ ಮದುವೆ ನಿಶ್ಚಯವಾಗಿತ್ತು.ಇದರಿಂದ ಕೋಪಗೊಂಡಿದ್ದ ಆರೋಪಿ ಯುಧಿಸ್ಠಿರ್ ಭುವನೇಶ್ವರ ಹೊರವಲಯದಲ್ಲಿರುವ ಚಂದಕ ಅರಣ್ಯ ನೋಡಲು ಕರೆದುಕೊಂಡು ಹೋಗಿ ಆಕೆಯ ಗಂಟಲನ್ನು ಸೀಳಿ ತಲೆಯನ್ನು ಕತ್ತರಿಸಿ ಕೊಲೆ ಮಾಡಿದ್ದಾನೆ.
ಡಿಸೆಂಬರ್ 13 ರಂದು ಸಸ್ಮಿತಾ ಬಿಸ್ವಾಲ್ ನಾಪತ್ತೆಯಾಗಿದ್ದು, ಆಕೆಯ ಕುಟುಂಬದವರು ಪೊಲೀಸರಿಗೆ ನಾಪತ್ತೆಯ ದೂರು ನೀಡಿದ್ದರು. ತಲೆ ಇಲ್ಲದ ಯುವತಿಯ ದೇಹವೊಂದು ಭುವನೇಶ್ವರ ಹೊರವಲಯದಲ್ಲಿರುವ ಚಂದಕ ಅರಣ್ಯ ವಿಭಾಗದಲ್ಲಿ ಪತ್ತೆಯಾಗಿದ್ದು, ತನಿಖೆಯ ವೇಳೆ ಮೃತ ಯುವತಿ ಸಸ್ಮಿತಾ ಬಿಸ್ವಾಲ್ ಎಂಬುದಾಗಿ ತಿಳಿದುಬಂದಿದೆ. ಈ ಬಗ್ಗೆ ಪ್ರಿಯತಮ ಯುಧಿಸ್ಠಿರ್ ನನ್ನು ಬಂಧಿಸಿ ವಿಚಾರಣೆ ಮಾಡಿದಾಗ ಸತ್ಯಾಂಸ ಬಾಯಿಬಿಟ್ಟಿದ್ದಾನೆ. ಸದ್ಯಕ್ಕೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.