ಉದ್ಯೋಗಿಗಳ ಲೈಂಗಿಕ ಜೀವನದ ಬಗ್ಗೆ ನಡೆದ ಸಮೀಕ್ಷೆಯಲ್ಲಿ ನಂಬರ್ ಸ್ಥಾನ ಯಾರಿಗೆ ಗೊತ್ತಾ?

ಶನಿವಾರ, 2 ನವೆಂಬರ್ 2019 (09:00 IST)
ಲಂಡನ್ : ಸೆಕ್ಸ್ ಆಟಿಕೆ ಕಂಪೆನಿ ಲೆಲೋ ಉದ್ಯೋಗಿಗಳ ಲೈಂಗಿಕ ಜೀವನದ ಬಗ್ಗೆ ಸಮೀಕ್ಷೆ ನಡೆಸಿದ್ದು, ಇದರಲ್ಲಿ ಕೃಷಿಕರು ಉತ್ತಮವಾದ ಲೈಂಗಿಕ ಜೀವನವನ್ನು ಹೊಂದಿರುತ್ತಾರೆ ಎಂಬ ಅಂಶ ತಿಳಿದುಬಂದಿದೆ.
ಸೆಕ್ಸ್ ಆಟಿಕೆ ಕಂಪೆನಿ ಲೆಲೋ 2 ಸಾವಿರ ಪುರುಷ ಹಾಗೂ ಮಹಿಳೆಯರ ಸಂದರ್ಶನ ನಡೆಸಿ ಸಮೀಕ್ಷೆ ನಡೆಸಿದ್ದು, ಇದರಲ್ಲಿ ಶೇ.33ರಷ್ಟು ಮಂದಿ ಕೃಪಿಕರು ಪ್ರತಿದಿನ ಲೈಂಗಿಕತೆಯಲ್ಲಿ ತೊಡಗುತ್ತಾರೆ ಎಂಬುದಾಗಿ ತಿಳಿದುಬಂದಿದೆ. ಹಾಗೇ ವಾಸ್ತುಶಿಲ್ಪಿಗಳ ಪೈಕಿ ಶೇ21ರಷ್ಟು ಮಂದಿ ಪ್ರತಿದಿನ ಲೈಂಗಿಕತೆಯಲ್ಲಿ ತೊಡಗಿದರೆ, ಕೇಶ ವಿನ್ಯಾಸಕಾರರ ಪೈಕಿ ಶೇ.17ರಷ್ಟು ಮಂದಿ ಪ್ರತಿದಿನ ಲೈಂಗಿಕ ಕ್ರಿಯೆ ನಡೆಸುತ್ತಾರೆ ಎಂಬುದಾಗಿ ತಿಳಿಸಿದ್ದಾರೆ.


ಆದರೆ ಕೊನೆಯ ಸ್ಥಾನದಲ್ಲಿ ಪತ್ರಕರ್ತರಿದ್ದು ತಿಂಗಳಿಗೆ ಒಂದು ಬಾರಿ ಲೈಂಗಿಕತೆಯಲ್ಲಿ ತೊಡಗುವುದಾಗಿ ಒಪ್ಪಿಕೊಂಡಿದ್ದಾರೆ. ಆ ಮೂಲಕ ಆಫೀಸ್ ಗಳಲ್ಲಿ ಹೆಚ್ಚು ಸಮಯ ಕೆಲಸ ಮಾಡುವ ಉದ್ಯೋಗಿಗಳ ಲೈಂಗಿಕ ಆಸಕ್ತಿ ಕಡಿಮೆ ಇರುತ್ತದೆ ಎಂಬುದು ಈ ಸಮೀಕ್ಷೆಯಿಂದ ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕರ್ತಾರ್ ಪುರ್ ಗುರುದ್ವಾರಕ್ಕೆ ಹೋಗುವ ಭಾರತೀಯರಿಗೆ ಸಿಹಿಸುದ್ದಿ ನೀಡಿದ ಪಾಕ್ ಪ್ರಧಾನಿ