Select Your Language

Notifications

webdunia
webdunia
webdunia
webdunia

ಕರ್ತಾರ್ ಪುರ್ ಗುರುದ್ವಾರಕ್ಕೆ ಹೋಗುವ ಭಾರತೀಯರಿಗೆ ಸಿಹಿಸುದ್ದಿ ನೀಡಿದ ಪಾಕ್ ಪ್ರಧಾನಿ

ಕರ್ತಾರ್ ಪುರ್ ಗುರುದ್ವಾರಕ್ಕೆ ಹೋಗುವ ಭಾರತೀಯರಿಗೆ ಸಿಹಿಸುದ್ದಿ ನೀಡಿದ ಪಾಕ್ ಪ್ರಧಾನಿ
ಇಸ್ಲಾಮಾಬಾದ್ , ಶನಿವಾರ, 2 ನವೆಂಬರ್ 2019 (06:51 IST)
ಇಸ್ಲಾಮಾಬಾದ್ : ಕರ್ತಾರ್ ಪುರ್ ಗುರುದ್ವಾರಕ್ಕೆ ಹೋಗುವ ಭಾರತೀಯರಿಗೆ ಈ ಎರಡು ದಿನ ಶುಲ್ಕವಿಲ್ಲದೆ ಪ್ರವೇಶ ನೀಡುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದ್ದಾರೆ.




ಹೌದು. ಗುರು ನಾನಕ್ ರ 550ನೇ ಜಯಂತಿಯಂದು ಹಾಗೂ ಕರ್ತಾರ್ ಪುರ ಕಾರಿಡಾರ್ ಉದ್ಘಾಟನೆ ದಿನದಂದು  ಗುರುದ್ವಾರಕ್ಕೆ ಹೋಗುವ ಭಾರತೀಯ ಯಾತ್ರಿಕರಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಟ್ವೀಟ್ ಮೂಲಕ ತಿಳಿಸಿದ್ದಾರೆ.


ಅಲ್ಲದೇ ಅಲ್ಲಿಗೆ ಹೋಗುವ ಭಾರತೀಯರು ಪಾಸ್ ಪೋರ್ಟ್ ಹೊಂದಬೇಕಾಗಿಲ್ಲ, ಬದಲಾಗಿ ಯಾವುದಾದರೂ ಗುರುತು ಪತ್ರ ಹೊಂದಿದ್ದರೆ ಸಾಕು ಮತ್ತು ಮುಂಚಿತವಾಗಿಯೇ ಬುಕ್ಕಿಂಗ್ ಮಾಡುವ ಅಗತ್ಯ ಇಲ್ಲ ಎಂದು ಕೂಡ ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುತ್ತಾ?