Select Your Language

Notifications

webdunia
webdunia
webdunia
webdunia

ಟೆಲಿಕಾಂ ಕಂಪೆನಿಗಳು ಆರ್ಥಿಕ ನಷ್ಟಕ್ಕೊಳಗಾಗುವುದನ್ನು ತಡೆಯಲು ಸರ್ಕಾರದಿಂದ ಹೊಸ ಯೋಜನೆ

ಟೆಲಿಕಾಂ ಕಂಪೆನಿಗಳು ಆರ್ಥಿಕ ನಷ್ಟಕ್ಕೊಳಗಾಗುವುದನ್ನು ತಡೆಯಲು ಸರ್ಕಾರದಿಂದ ಹೊಸ ಯೋಜನೆ
ನವದೆಹಲಿ , ಶುಕ್ರವಾರ, 1 ನವೆಂಬರ್ 2019 (09:15 IST)
ನವದೆಹಲಿ : ಟೆಲಿಕಾಂ ಕಂಪೆನಿಗಳು ಆರ್ಥಿಕ ನಷ್ಟಕ್ಕೆ ಒಳಗಾಗುತ್ತಿರುವ ಹಿನ್ನಲೆಯಲ್ಲಿ ಇದನ್ನು ತಡೆಯಲು ಸರ್ಕಾರ ಹೊಸ ನಿಯಮವೊಂದನ್ನು ಜಾರಿಗೆ ತರಲಿದೆ ಎನ್ನಲಾಗಿದೆ.




ಕೇಂದ್ರ ಸರ್ಕಾರ ರಚಿಸಿದ ಕಾರ್ಯದರ್ಶಿಗಳ ಸಮಿತಿ, ಉಚಿತ ಕರೆಗಳು ಹಾಗೂ ಅಗ್ಗದ ಡೇಟಾ ಸೇವೆಯನ್ನು ಸ್ಥಗಿತಗೊಳಿಸಿ ಕರೆ ಹಾಗೂ ಡೇಟಾ ಸೇವೆಗಳಿಗೆ ಸರ್ಕಾರವೇ ಕನಿಷ್ಠ ಶುಲ್ಕ ನಿಗದಿಪಡಿಸುವ ಸಾಧ್ಯತೆ ಇದೆ . ಈ ಬಗ್ಗೆ ಸರ್ಕಾರ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಿದೆ ಎನ್ನಲಾಗಿದೆ.


ಒಂದು ವೇಳೆ ಈ ನಿಯಮ ಜಾರಿಯಾದರೆ ರಿಲಾಯನ್ಸ್ ಜಿಯೋ ಗ್ರಾಹಕರಿಗೆ ನೀಡುತ್ತಿದ್ದ ಅಗ್ಗದ ಆಫರ್ ಗಳಿಗೆ ಬ್ರೇಕ್ ಬೀಳಲಿದ್ದು, ಇತರ ಟೆಲಿಕಾಂ ಕಂಪೆನಿಗಳ ಸಂಕಷ್ಟ ಕೊನೆಯಾಗಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮೊಟ್ಟೆ, ಮಾಂಸ ತಿನ್ನುವ ಮಕ್ಕಳು ನಂತರ ನರಭಕ್ಷಕರಾಗುತ್ತಾರೆ- ಬಿಜೆಪಿ ನಾಯಕನಿಂದ ವಿವಾದಾತ್ಮಕ ಹೇಳಿಕೆ