Publish Date: Fri, 01 Nov 2019 (09:21 IST)
Updated Date: Fri, 01 Nov 2019 (09:23 IST)
ಬೆಂಗಳೂರು : ಒಣಕೊಬ್ಬರಿ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಸೇವಿಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು.
ಒಣಕೊಬ್ಬರಿಯನ್ನು ಸೇವಿಸುವುದರಿಂದ ಪುರುಷರ ಲೈಂಗಿಕ ಜೀವನ ಉತ್ತಮವಾಗಿರುತ್ತದೆ. ಯಾಕೆಂದರೆ ಒಣಕೊಬ್ಬರಿ ಸೇವಿಸುವುದರಿಂದ ಸಮೃದ್ಧವಾದ ಸೆಲೆನಿಯಮ್ ಸಿಗುತ್ತದೆ. ಇದು ಪುರುಷರ ಬಂಜೆತನವನ್ನು ನಿವಾರಿಸುತ್ತದೆ.
ಅಲ್ಲದೇ ಒಣಕೊಬ್ಬರಿ ಸೇವನೆಯಿಂದ ಕ್ಯಾನ್ಸರ್ , ರಕ್ತ ಹೀನತೆ ಸಮಸ್ಯೆಯನ್ನು ತಡೆಗಟ್ಟಬಹುದು. ಒಣಕೊಬ್ಬರಿ ಸೇವಿಸುತ್ತಿದ್ದರೆ ಮಲಬದ್ಧತೆ, ಅಲ್ಸರ್, ಸಂಧಿವಾತ ಸಮಸ್ಯೆಯನ್ನು ನಿವಾರಿಸಬಹುದು.