Publish Date: Fri, 01 Nov 2019 (09:18 IST)
Updated Date: Fri, 01 Nov 2019 (09:20 IST)
ಬೆಂಗಳೂರು : ತುಪ್ಪ ಆರೋಗ್ಯಕ್ಕೆ ಮಾತ್ರವಲ್ಲ, ಇದರಿಂದ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ತುಪ್ಪ ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯ ನಿರ್ವಹಿಸುತ್ತದೆ. ಚಳಿಗಾಲದಲ್ಲಿ ತುಪ್ಪದ ಫೇಸ್ ಪ್ಯಾಕ್ ಹಚ್ಚುವುದರಿಂದ ಒರಟಾದ ಮುಖ ಮೃದುವಾಗುತ್ತದೆ.
ತುಪ್ಪ ಮತ್ತು ಹೆಸರುಬೇಳೆ ಹಿಟ್ಟನ್ನು ಹಾಕಿ ಪೇಸ್ಟ್ ತಯಾರಿಸಿಕೊಂಡು ಅದನ್ನು ಮುಖಕ್ಕೆ ಹಾಗೂ ಕುತ್ತಿಗೆಗೆ ಹಚ್ಚಿ. ಬಳಿಕ 15 ನಿಮಿಷ ಬಿಟ್ಟು ತಣ್ಣೀರಿನಿಂದ ಮುಖ ತೊಳೆಯಿರಿ. ಇದು ನಿಯಮಿತವಾಗಿ ಹಚ್ಚುತ್ತಾ ಬಂದರೆ ಶುಷ್ಕ ಚರ್ಮವು ಕಾಂತಿಯುತವಾಗಿ, ಹೊಳೆಯುತ್ತದೆ.