Select Your Language

Notifications

webdunia
webdunia
webdunia
webdunia

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅರೆಸ್ಟ್ ಮಾಡಲು ಮನೆಗೆ ಹೋದ ಪೊಲೀಸರು ?

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅರೆಸ್ಟ್ ಮಾಡಲು ಮನೆಗೆ ಹೋದ ಪೊಲೀಸರು ?
ಇಸ್ಲಾಮಾಬಾದ್ , ಸೋಮವಾರ, 6 ಮಾರ್ಚ್ 2023 (07:12 IST)
ಇಸ್ಲಾಮಾಬಾದ್ : ತೋಶಾಖಾನ (ರಾಜ್ಯ ಉಡುಗೊರೆ ಭಂಡಾರ) ಪ್ರಕರಣದಡಿ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಲು ಅವರ ಮನೆಗೆ ಪೊಲೀಸರು ಹೋಗಿ ಪೇಚಿಗೆ ಸಿಲುಕಿದ್ದಾರೆ.
 
ಮನೆಯಲ್ಲಿ ಎಷ್ಟು ಹುಡುಕಿದರೂ ಇಮ್ರಾನ್ ಖಾನ್ ಸಿಗದೇ ಇರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಪಾಕ್ ಮಾಜಿ ಪ್ರಧಾನಿ ಬಂಧನದ ಹೈಡ್ರಾಮಾ ಭಾನುವಾರ ನಡೆಯಿತು.

ಇಸ್ಲಾಮಾಬಾದ್ ಪೊಲೀಸರು ಇಮ್ರಾನ್ ಖಾನ್ ಅವರನ್ನು ಬಂಧಿಸಲು ಅವರ ಮನೆಗೆ ತೆರಳಿದ ಸಂದರ್ಭ ಅನೇಕ ಪ್ರತಿಭಟನಾಕಾರರು ಅವರನ್ನು ತಡೆದರು. ಇಮ್ರಾನ್ ಖಾನ್ ಅವರನ್ನು ಬಂಧಿಸಿದರೆ ದೇಶದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ತೈಲ ದಾಸ್ತಾನು ಬೆಂಕಿ ಅವಘಡ : 19 ಮಂದಿ ಸಾವು