ಚೀನಾದಲ್ಲಿ ಕೊರೊನಾ ವೈರಸ್ ಅಟ್ಟಹಾಸ, ಮೃತರ ಸಂಖ್ಯೆ 2,327ಕ್ಕೆ ಏರಿಕೆ

ಶನಿವಾರ, 22 ಫೆಬ್ರವರಿ 2020 (12:22 IST)
ಚೀನಾ : ಚೀನಾದಲ್ಲಿ ಮಹಾಮಾರಿ ಕೋವಿಡ್ ಅಟ್ಟಹಾಸ ಮುಂದುವರಿದಿದ್ದು, ಕೊರೊನಾ ವೈರಸ್ ಗೆ ಮೃತಪಟ್ಟವರ ಸಂಖ್ಯೆ 2 ಸಾವಿರ ಗಡಿ ದಾಟಿದೆ.


ಈಗಾಗಲೇ ಚೀನಾದಲ್ಲಿ ಕೊರೊನಾ ವೈರಸ್ ಗೆ ಮೃತಪಟ್ಟವರ ಸಂಖ್ಯೆ 2,327ಕ್ಕೆ ಏರಿಕೆ ಆಗಿದೆ. ನಿನ್ನೆ ಒಂದೇ ದಿನಕ್ಕೆ 109 ಜನರು ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ.


ಚೀನಾದಲ್ಲಿ ಸುಮಾರು 70,000 ಕ್ಕು ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಇಡೀ ಜಗತ್ತಿನ ಜನರು ಈ ಮಹಾಮಾರಿಯ ಅಟ್ಟಹಾಸಕ್ಕೆ  ಬೆಚ್ಚಿ ಬಿದ್ದಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪಾಕ್ ಪರ ಘೋಷಣೆ ಪ್ರಕರಣದ ಕುರಿತು ಸಚಿವ ಸಿ.ಸಿ. ಪಾಟೀಲ್ ಹೇಳಿದ್ದೇನು?