ಎಲ್ ಪಿಜಿ ದರ ಏರಿಕೆ; ಸ್ಮೃತಿ ಇರಾನಿ ಕಾಲೆಳೆದ ರಾಹುಲ್ ಗಾಂಧಿ

ಶುಕ್ರವಾರ, 14 ಫೆಬ್ರವರಿ 2020 (09:35 IST)
ನವದೆಹಲಿ : ಎಲ್ ಪಿಜಿ ದರ ಏರಿಕೆಯಾಗಿರುವ ಹಿನ್ನಲೆಯಲ್ಲಿ ಇದನ್ನು  ಖಂಡಿಸಿದ ರಾಹುಲ್ ಗಾಂಧಿ  ಟ್ವೀಟರ್ ನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರ ಕಾಲೆಳೆದಿದ್ದಾರೆ.


ಈ ಹಿಂದೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಎಲ್ ಪಿಜಿ ದರ ಹೆಚ್ಚಳವಾಗಿದ್ದ ವೇಳೆ ಅದನ್ನು ಖಂಡಿಸಿ ಸ್ಮೃತಿ ಇರಾನಿ ರಸ್ತೆಯಲ್ಲಿ ಸಿಲಿಂಡರ್ ಇಟ್ಟು ಪ್ರತಿಭಟನೆ ನಡೆಸಿದ್ದರು.


ಇದೀಗ ರಾಹುಲ್ ಗಾಂಧಿ ಅದಕ್ಕೆ ಸಂಬಂಧಪಟ್ಟ ಫೋಟೋಗಳನ್ನು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿ ಎಲ್ ಪಿಜಿ ದರ 150 ರೂ ಏರಿಕೆಯಾಗಿರುವುದಕ್ಕೆ ಬಿಜೆಪಿ ಸದಸ್ಯರು ನಡೆಸುತ್ತಿರುವ  ಈ ಪ್ರತಿಭಟನೆಯನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ವ್ಯಂಗ್ಯ ಮಾಡಿದ್ದಾರೆ. ಹಾಗೇ ಬೆಲೆ ಇಳಿಸುವಂಸತೆ ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದು ಪ್ರೇಮಿಗಳ ದಿನಾಚರಣೆಯ ಹಿನ್ನಲೆ; ಪ್ರೇಮಿಗಳ ದಿವನ್ನು ಆಚರಿಸದಂತೆ ಕರೆ ನೀಡಿದ ಬಜರಂಗದಳ