Publish Date: Fri, 25 Aug 2017 (07:31 IST)
Updated Date: Fri, 25 Aug 2017 (07:33 IST)
ಬೀಜಿಂಗ್: ಲಡಾಕ್ ಗಡಿ ಭಾಗದಲ್ಲಿ ರಸ್ತೆ ನಿರ್ಮಿಸಲು ಹೊರಟ ಭಾರತದ ಪ್ರಯತ್ನಕ್ಕೆ ಚೀನಾ ಅಡ್ಡಗಾಲು ಹಾಕಿದೆ. ಇದು ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಹಾಳು ಮಾಡಬಹುದು ಎಂದು ಅದು ಎಚ್ಚರಿಸಿದೆ.
‘ಲಡಾಕ್ ಗಡಿಯಲ್ಲಿ ರಸ್ತೆ ನಿರ್ಮಿಸುವ ದುಸ್ಸಾಹಸ ಮಾಡದಿರಿ. ಇದು ಡೋಕ್ಲಾಂ ಗಡಿ ವಿವಾದಿಂದ ಉಂಟಾದ ವೈಮನಸ್ಯವನ್ನು ಮತ್ತಷ್ಟು ಹದಗೆಡಿಸಬಹುದು’ ಎಂದು ಚೀನಾ ವಿದೇಶಾಂಗ ವಕ್ತಾರ ಹ್ಯೂ ಎಚ್ಚರಿಕೆ ನೀಡಿದ್ದಾರೆ.
ಭಾರತ ಬಹಿರಂಗವಾಗಿ ಶಾಂತಿ ಬಯಸುತ್ತೇವೆ ಎಂದು ಹೇಳಿಕೊಂಡು, ಇನ್ನೊಂದೆಡೆ ಶಾಂತಿ ಕದಡುವ ಯತ್ನ ಮಾಡುತ್ತಿದೆ. ಹೇಳುತ್ತಿರುವುದು ಒಂದು ಮಾಡುತ್ತಿರುವುದು ಇನ್ನೊಂದು. ಶಾಂತಿ ಬೇಕಾದರೆ ಇಂತಹ ಪ್ರಯತ್ನವನ್ನು ಕೈ ಬಿಡುವುದು ಒಳಿತು ಎಂದು ಅವರು ಎಚ್ಚರಿಸಿದ್ದಾರೆ.
ಅತ್ತ ಡೋಕ್ಲಾಂ ಗಡಿಯಲ್ಲೂ ಚೀನಾ ರಸ್ತೆ ನಿರ್ಮಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ತಕಾರಾರು ಆರಂಭವಾಗಿತ್ತು.