Select Your Language

Notifications

webdunia
webdunia
webdunia
webdunia

ಗಡಿಯಲ್ಲಿ ಗಡ ಗಡ ನಡುಗಿಸಬೇಕಾ? ಭಾರತಕ್ಕೆ ಚೀನಾ ಪ್ರಶ್ನೆ

ಭಾರತ-ಚೀನಾ
ನವದೆಹಲಿ: ನಮ್ಮ ಸೇನೆಯೇನಾದರೂ, ನಿಮ್ಮ ಗಡಿಯೊಳಗೆ ನುಗ್ಗಿದರೆ ಮುಗಿದೇ ಹೋಯ್ತು ನಿಮ್ಮ ಕತೆ. ಅರಾಜಕತೆ, ಗೊಂದಲ ಗ್ಯಾರಂಟಿ ಎಂದು ಚೀನಾ ಭಾರತಕ್ಕೆ ಎಚ್ಚರಿಸಿದೆ.

 
ಡೋಕ್ಲಾಂ ಗಡಿಯಿಂದ ಸೇನೆ ಹಿಂತೆಗೆದುಕೊಳ್ಳುವಂತೆ ಮತ್ತೆ ತನ್ನ ಒತ್ತಾಯ ಮುಂದುವರಿಸಿರುವ ಚೀನಾ ಭಾರತವನ್ನು ಕೆಣಕುವ ಕೆಲಸ ಮಾಡಿದೆ.

ಡೋಕ್ಲಾಂನಲ್ಲಿ ರಸ್ತೆ ನಿರ್ಮಿಸುವುದರಿಂದ ತಮಗೆ ಅಪಾಯ ಎನ್ನುವ ಭಾರತದ ನಿಲುವು ಹಾಸ್ಯಾಸ್ಪದ ಎಂದು ಚೀನಾ ಹೇಳಿದೆ. ಚೀನಾದ ಸಾರ್ವಭೌಮತೆಗೆ ಧಕ್ಕೆ ತರಲು ಹೊರಗಿನ ದೇಶಗಳಿಗೆ ಅವಕಾಶ ಕೊಡಲ್ಲ.

ನಮ್ಮ ಗಡಿಯೊಳಗೆ ನುಗ್ಗಿದ್ದೂ ಅಲ್ಲದೆ, ಭಾರತ ಹಾಸ್ಯಾಸ್ಪದ ಹೇಳಿಕೆ ನೀಡುತ್ತಿದೆ. ಒಂದು ವೇಳೆ ನಾವೂ ಹೀಗೇ ಅವರ ಗಡಿಯೊಳಗೆ ನುಗ್ಗಿದರೆ ಕತೆ ಏನಾಗಬಹುದು ಗೊತ್ತಾ? ಎಂದು ಚೀನಾ ವಿದೇಶಾಂಗ ವಕ್ತಾರ ಹುವಾ ಚ್ಯುನಾಂಗ್ ಎಚ್ಚರಿಸಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸೋನಿಯಾ ಗಾಂಧಿ ಅಳಿಯನಿಗೆ ಮತ್ತೆ ಕಾದಿದೆ ಗ್ರಹಚಾರ