Select Your Language

Notifications

webdunia
webdunia
webdunia
webdunia

ಮತ್ತೆ ಮಿಲಿಟರಿ ತಾಲೀಮು ಪ್ರಾರಂಭಿಸಿದ ಚೀನಾ

ಮತ್ತೆ ಮಿಲಿಟರಿ ತಾಲೀಮು ಪ್ರಾರಂಭಿಸಿದ ಚೀನಾ
ಬೀಜಿಂಗ್ , ಶನಿವಾರ, 8 ಏಪ್ರಿಲ್ 2023 (07:05 IST)
ಬೀಜಿಂಗ್ : ತೈವಾನ್ ಅಧ್ಯಕ್ಷ ತ್ಸಾಯಿ ಇಂಗ್ ವೆನ್ ಅಮೆರಿಕ ಪ್ರವಾಸ ಮುಗಿಸಿ ಹಿಂದಿರುಗಿದ್ದಾರೆ. ಆದರೆ ಇದನ್ನು ಸಹಿಸದ ಚೀನಾ ತೈವಾನ್ ಸುತ್ತಲಿನ ಸಮುದ್ರ ಪ್ರದೇಶದಲ್ಲಿ 3 ದಿನಗಳ ಮಿಲಿಟರಿ ತಾಲೀಮು ಪ್ರಾರಂಭಿಸುವುದಾಗಿ ಶನಿವಾರ ಘೋಷಿಸಿದೆ.
 
ತೈವಾನ್ ಅಧ್ಯಕ್ಷ ಅಮೆರಿಕದಿಂದ ಹಿಂದಿರುಗಿದ ಒಂದು ದಿನದ ಬಳಿಕವಷ್ಟೇ ಚೀನಾ ತೈವಾನ್ ಸುತ್ತ ಮಿಲಿಟರಿ ತಾಲೀಮು ಪ್ರಾರಂಭಿಸಿದೆ. ಪೀಪಲ್ಸ್ ಲಿಬರೇಶನ್ ಆರ್ಮಿಯ ಈಸ್ಟರ್ನ್ ಥೀಯೇಟರ್ ಕಮಾಂಡ್ ಯುನೈಟೆಡ್ ಶಾರ್ಪ್ ಸ್ವೀರ್ಡ್ ಏಪ್ರಿಲ್ 8 ರಿಂದ 10 ರವರೆಗೆ ಯುದ್ಧ ತಯಾರಿ ನಡೆಸುತ್ತಿದೆ ಎಂದು ಹೇಳಿದೆ.

ತೈವಾನ್ನ ರಕ್ಷಣಾ ಸಚಿವಾಲಯ ತನ್ನ ದ್ವೀಪದ ಸುತ್ತಲೂ 13 ಚೀನಾದ ವಿಮಾನಗಳು ಮತ್ತು 3 ಯುದ್ಧನೌಕೆಗಳನ್ನು ಪತ್ತೆಹಚ್ಚಿರುವುದಾಗಿ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನ್ಯಾಯ ಕೊಡಿಸೋದ್ರಲ್ಲಿ ರಾಜ್ಯದ ಪೊಲೀಸ್ರೆ ನಂಬರ್ 1