Select Your Language

Notifications

webdunia
webdunia
webdunia
webdunia

11 ಸ್ಥಳಗಳಿಗೆ ಮರುನಾಮಕರಣ ಮಾಡಿದ ಚೀನಾ

11 ಸ್ಥಳಗಳಿಗೆ ಮರುನಾಮಕರಣ ಮಾಡಿದ ಚೀನಾ
ಇಟಾನಗರ , ಬುಧವಾರ, 5 ಏಪ್ರಿಲ್ 2023 (10:22 IST)
ಇಟಾನಗರ : ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಚೀನಾ ಮರುನಾಮಕರಣ ಮಾಡಿದೆ. ಈ ಮೂಲಕ ಅರುಣಾಚಲ ಪ್ರದೇಶದ ಸ್ಥಳಗಳಿಗೆ ಚೀನಾವು ಇದು ಮೂರನೇ ಬಾರಿಗೆ ಮರುನಾಮಕರಣ ಮಾಡಿದೆ. ಅದನ್ನು ಜಂಗ್ನಾನ್, ಟಿಬೆಟ್ನ ದಕ್ಷಿಣ ಭಾಗ ಎಂದು ಕರೆದಿದೆ.
 
ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಸೋಮವಾರ ಚೀನಾದ ಕ್ಯಾಬಿನೆಟ್, ಸ್ಟೇಟ್ ಕೌನ್ಸಿಲ್ ನೀಡಿದ ಭೌಗೋಳಿಕ ಹೆಸರುಗಳ ಮೇಲಿನ ನಿಯಮಗಳಿಗೆ ಅನುಸಾರವಾಗಿ ಚೈನೀಸ್, ಟಿಬೆಟಿಯನ್ ಮತ್ತು ಪಿನ್ಯಿನ್ ಅಕ್ಷರಗಳಲ್ಲಿ ಬಿಡುಗಡೆ ಮಾಡಿದೆ. ಚೀನಾ ಬಿಡುಗಡೆ ಮಾಡಿರುವ ಹೆಸರುಗಳ ಪಟ್ಟಿಯಲ್ಲಿ ಅರುಣಾಚಲ ಪ್ರದೇಶದ 5 ಪರ್ವತ ಶಿಖರಗಳು, 2 ಭೂ ಪ್ರದೇಶಗಳು, 2 ವಸತಿ ಪ್ರದೇಶಗಳು ಮತ್ತು 2 ನದಿಗಳು ಸೇರಿವೆ.

ಈ ಮೊದಲು 2018 ಹಾಗೂ 2021ರಲ್ಲಿ ಮೊದಲ 2 ಪಟ್ಟಿಗಳನ್ನು ಚೀನಾ ಬಿಡುಗಡೆ ಮಾಡಿತ್ತು. 2018ರಲ್ಲಿ 6 ಹೆಸರಗಳನ್ನು ಹಾಗೂ 2021ರಲ್ಲಿ ಅರುಣಾಚಲ ಪ್ರದೇಶದ 15 ಸ್ಥಳಗಳಿಗೆ ಮರುನಾಮಕರಣ ಮಾಡಿತ್ತು. 

ಈ ಹಿಂದೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಾತನಾಡಿ, ಚೀನಾವು ಅರುಣಾಚಲ ಪ್ರದೇಶದ ಸ್ಥಳಗಳ ಮರುನಾಮಕರಣಕ್ಕೆ ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. ಅರುಣಾಚಲ ಪ್ರದೇಶವು ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ಮುಂದೆ ಇಟಲಿಯಲ್ಲಿ ಇಂಗ್ಲಿಷ್ ಭಾಷೆ ಬ್ಯಾನ್ !