Select Your Language

Notifications

webdunia
webdunia
webdunia
webdunia

ಚೀನಾ ನಡವಳಿಕೆ ಕಳವಳಕಾರಿಯಾಗಿದೆ- ರಿಷಿ ಸುನಕ್

ಚೀನಾ ನಡವಳಿಕೆ ಕಳವಳಕಾರಿಯಾಗಿದೆ- ರಿಷಿ ಸುನಕ್
ಚೀನಾ , ಬುಧವಾರ, 15 ಮಾರ್ಚ್ 2023 (16:46 IST)
ಕಳೆದ ಕೆಲವು ವರ್ಷಗಳಲ್ಲಿ ಚೀನಾದ ನಡವಳಿಕೆಯು ಕಳವಳಕಾರಿಯಾಗಿದೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ. ಆಕಸ್ ಒಪ್ಪಂದದ ಕುರಿತಾದ ಚರ್ಚೆಗೆ ಅಮೆರಿಕಕ್ಕೆ ಆಗಮಿಸಿರುವ ಅವರು, ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯ ಮೌಲ್ಯಗಳು ಬ್ರಿಟನ್‌ಗಿಂತಲೂ ಹೆಚ್ಚು ಭಿನ್ನವಾಗಿವೆ ಎಂದು ಪ್ರತಿಪಾದಿಸಿದ್ದಾರೆ. ಚೀನಾ ನಮ್ಮ ಆರ್ಥಿಕ ಹಿತಾಸಕ್ತಿಗಳಿಗೆ ಬೆದರಿಕೆಯಾಗಿದ್ದು, ಇಡೀ ವಿಶ್ವಕ್ಕೆ ವ್ಯವಸ್ಥಿತ ಸವಾಲನ್ನು ಒಡ್ಡುತ್ತಿದೆ ಎಂಬುದು ಸ್ಪಷ್ಟವಾಗಿದೆ. ಆ ದೇಶವು ಮೂಲಭೂತವಾಗಿ ವಿಭಿನ್ನ ಮೌಲ್ಯಗಳನ್ನು ಹೊಂದಿದೆ ಮತ್ತು ಕಳೆದ ಕೆಲವು ವರ್ಷಗಳಿಂದ ಅದರ ನಡವಳಿಕೆಯು ಕಳವಳಕಾರಿಯಾಗಿದೆ ಎಂದು ಸುನಕ್ ತನ್ನ ಪ್ರವಾಸದ ಸಮಯದಲ್ಲಿ ಸ್ಕೈ ನ್ಯೂಸ್‌ಗೆ ತಿಳಿಸಿದರು. ಬ್ರಿಟನ್ ಈಗ ತನ್ನ ಸ್ಥಾನಕ್ಕೆ ಮರಳಿದೆ. ಚೀನಾ ಒಡ್ಡುವ ಸವಾಲನ್ನು ಹೆಚ್ಚು ದೃಢವಾಗಿ ಎದುರಿಸಲು ಸಿದ್ಧವಾಗಿದೆ ಎಂದು ಹೇಳಿದರು.
 
ಇಂಡೊ-ಪೆಸಿಫಿಕ್‌ನಲ್ಲಿ ಹೆಚ್ಚುತ್ತಿರುವ ಚೀನಾದ ಮಿಲಿಟರಿ ಪ್ರಭಾವವನ್ನು ಇತರ ರಕ್ಷಣಾ ಪಾಲುದಾರ ದೇಶಗಳ ನೆರವಿನೊಂದಿಗೆ ಎದುರಿಸಲು ಅಮೆರಿಕ, ಬ್ರಿಟನ್ ಮತ್ತು ಆಸ್ಟ್ರೇಲಿಯಾ ಯೋಜಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ನಗರದಲ್ಲಿ ಪ್ಲೇಕ್ಸ್ ಗಳು ಬ್ಯಾನರ್ ಗಳು ನಿಲುತ್ತಿದ್ದಂತೆ, ಶುರುವಾಗಿತ್ತು ಪೋಸ್ಟರ್ ಗಳ ಹಾವಳಿ..!