Select Your Language

Notifications

webdunia
webdunia
webdunia
webdunia

ಇನ್ಮುಂದೆ ಇಟಲಿಯಲ್ಲಿ ಇಂಗ್ಲಿಷ್ ಭಾಷೆ ಬ್ಯಾನ್ !

ಇನ್ಮುಂದೆ ಇಟಲಿಯಲ್ಲಿ ಇಂಗ್ಲಿಷ್  ಭಾಷೆ ಬ್ಯಾನ್ !
ರೋಮ್ , ಬುಧವಾರ, 5 ಏಪ್ರಿಲ್ 2023 (09:17 IST)
ರೋಮ್ : ಇನ್ನು ಮುಂದೆ ಸರ್ಕಾರಿ ಸಂವಹನ ಇಟಲಿ ಭಾಷೆಯಲ್ಲಿ ನಡೆಯಬೇಕು. ಒಂದು ವೇಳೆ ಇಂಗ್ಲಿಷ್ ಅಥವಾ ಬೇರೆ ಯಾವುದೇ ವಿದೇಶಿ ಭಾಷೆಯಲ್ಲಿ ನಡೆದರೆ ದಂಡವನ್ನು ವಿಧಿಸುವ ಪ್ರಸ್ತಾಪ ಇರುವ ಚರ್ಚೆಗೆ ಗ್ರಾಸವಾಗುವ ಮಸೂದೆಯೊಂದು ಇಟಲಿ ಶಾಸನಸಭೆಯಲ್ಲಿ ಮಂಡನೆಯಾಗಿದೆ.
 
ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿಯ ಅವರ ಬ್ರದರ್ಸ್ ಆಫ್ ಇಟಲಿ ಪಕ್ಷ ಕರಡು ಮಸೂದೆಯನ್ನು ಮಂಡಿಸಿದೆ. ಇದರ ಪ್ರಕಾರ ದೇಶದಲ್ಲಿ ಅಧಿಕೃತ ಸಂವಹನಕ್ಕೆ ಇಟಲಿ ಭಾಷೆಯಲ್ಲಿ ನಡೆಯಬೇಕು.

ಯಾವುದೇ ವಿದೇಶಿ ಭಾಷೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಇಂಗ್ಲಿಷ್ ಭಾಷೆಯಲ್ಲಿ ಸಂವಹನ ಮಾಡುವಂತಿಲ್ಲ ಎಂಬ ನಿಯಮವನ್ನು ಒಳಗೊಂಡಿದೆ. ಒಂದು ವೇಳೆ ನಿಯಮವನ್ನು ಉಲ್ಲಂಘಿಸಿದರೆ 100,000 ಯುರೋ (ಸುಮಾರು 90 ಲಕ್ಷ ರೂ.) ವರೆಗೆ ದಂಡವನ್ನು ವಿಧಿಸಲಾಗುವ ಪ್ರಸ್ತಾಪವನ್ನು ಒಳಗೊಂಡಿದೆ.

ಈ ಮಸೂದೆ ಈಗ ಸಂಸತ್ತಿನ ಚರ್ಚೆಯ ಹಾದಿಯಲ್ಲಿದೆ. ಇಟಾಲಿಯನ್ ಭಾಷೆಯನ್ನೇ ಲಿಖಿತ ಹಾಗೂ ಮೌಖಿಕವಾಗಿ ಬಳಸಲು ಹಾಗೂ ಸಾರ್ವಜನಿಕರಿಗೆ ಈ ಭಾಷೆಯ ಜ್ಞಾನ ಹಾಗೂ ಪಾಂಡಿತ್ಯವನ್ನು ಹೆಚ್ಚಿಸಲು ಈ ನಿರ್ಧಾರ ಮಾಡಲಾಗಿದೆ. ಇದೀಗ ವಿದೇಶಿ ಭಾಷೆಗಳ ಬ್ಯಾನ್ ಇಟಲಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಂಪನಿಗಳಲ್ಲಿ ಅಧಿಕೃತ ದಾಖಲೆಗಳಲ್ಲಿರುವ ಇಂಗ್ಲಿಷ್ ಬಳಕೆಯನ್ನು ನಿಷೇಧಿಸುತ್ತದೆ. 

ಇಷ್ಟು ಮಾತ್ರವಲ್ಲದೇ ದೇಶದಲ್ಲಿ ಸಾರ್ವಜನಿಕ ಸರಕು ಹಾಗೂ ಸೇವೆಗಳ ಪ್ರಚಾರ ಮತ್ತು ಬಳಕೆಗೆ ಈ ನಿಯಮ ಕಡ್ಡಾಯವಾಗಿದೆ. ಒಂದು ವೇಳೆ ಉಲ್ಲಂಘನೆಯಾದರೆ 5,000 ಯುರೋದಿಂದ 100,000 ಯುರೋ ವರೆಗೆ ದಂಡ ವಿಧಿಸುವ ಪ್ರಸ್ತಾಪವನ್ನು ಒಳಗೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ