Publish Date: Sun, 12 Jun 2022 (12:20 IST)
Updated Date: Sun, 12 Jun 2022 (12:21 IST)
ರೋಮ್ : ಇಟಲಿಯಲ್ಲಿ ಹೆಲಿಕಾಪ್ಟರ್ ಒಂದು 2 ದಿನಗಳ ಹಿಂದೆ ರಾಡಾರ್ನಿಂದ ಕಣ್ಮರೆಯಾಗಿತ್ತು.
ಪತನವಾಗಿದ್ದ ಹೆಲಿಕಾಪ್ಟರ್ನಿಂದ ಇದೀಗ 7 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಲಿಕಾಪ್ಟರ್ ಗುರುವಾರ ಟಸ್ಕನಿಯ ಲುಕ್ಕಾದಿಂದ ಟೇಕ್ ಆಫ್ ಆಗಿದ್ದು, ಟ್ರೆವಿಸೊ ನಗರದ ಕಡೆಗೆ ಹೋಗುತ್ತಿತ್ತು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಹೆಲಿಕಾಪ್ಟರ್ ಪತನವಾಗಿದೆ ಎಂದು ಮೂಲಗಳು ತಿಳಿಸಿವೆ.
ಹೆಲಿಕಾಪ್ಟರ್ನಲ್ಲಿದ್ದ 7 ಪ್ರಯಾಣಿಕರು ಮೃತಪಟ್ಟಿದ್ದಾರೆ. ಅದರಲ್ಲಿ ನಾಲ್ವರು ಟರ್ಕಿ ಮೂಲದವರು ಹಾಗೂ ಇಬ್ಬರು ಲೆಬನಾನಿಯವರು ಇದ್ದು, ಒಬ್ಬ ಇಟಲಿ ಮೂಲದ ಪೈಲಟ್ ಸೇರಿದಂತೆ ಎಲ್ಲರೂ ಮೃತಪಟ್ಟಿದ್ದಾರೆ.
ಟಸ್ಕನಿ ಹಾಗೂ ಎಮಿಲಿಯಾ ರೋಮ್ಯಾಗ್ನಾ ಪ್ರದೇಶದ ಗಡಿಯಲ್ಲಿರುವ ಪರ್ವತ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತ್ತೆಯಾಗಿದೆ. ಹೆಲಿಕಾಪ್ಟರ್ ಸಂಪೂರ್ಣವಾಗಿ ಸುಟ್ಟು ಹೋಗಿರುವುದರಿಂದ ಎಲ್ಲರೂ ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.