Select Your Language

Notifications

webdunia
webdunia
webdunia
webdunia

ಸರ್ಕಾರದಿಂದ ತನಿಖೆ: ಕಲುಷಿತ ನೀರು ಕುಡಿದು ಮೂವರ ಸಾವು.

ಸರ್ಕಾರದಿಂದ ತನಿಖೆ: ಕಲುಷಿತ ನೀರು ಕುಡಿದು ಮೂವರ ಸಾವು.
ಬೆಂಗಳೂರು , ಸೋಮವಾರ, 6 ಜೂನ್ 2022 (11:32 IST)
ಬೆಂಗಳೂರು  : ರಾಯಚೂರಿನಲ್ಲಿ ಕಲುಷಿತ ನೀರು ಕುಡಿದು ಸಾವನ್ನಪ್ಪಿರುವ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಲುಷಿತ ನೀರು ಸೇವಿಸಿ ಮೂವರು ಸಾವನ್ನಪ್ಪಿರುವ ಹಿನ್ನೆಲೆ ರಾಯಚೂರಿನಲ್ಲಿ ಇಂದು ಬಂದ್‍ಗೆ ಕರೆ ಕೊಡಲಾಗಿದೆ. ಈ ಕುರಿತು ಮಾತನಾಡಿದ ಸಿಎಂ, ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದರ ಬಗ್ಗೆ ಸಂಪೂರ್ಣ ವರದಿ ತರಿಸಿ ಕ್ರಮ ತೆಗೆದುಕೊಳ್ಳುತ್ತೇವೆ.
ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಕೊಡ್ತೇವೆ ಎಂದು ಘೋಷಿಸಿದರು.

ರಾಯಚೂರಿನಲ್ಲಿ ಕಲುಷಿತ ನೀರಿನ ಹಿನ್ನೆಲೆ ಡಿಸಿಗೆ ರಾಯಚೂರಿನ ಎಲ್ಲ ವಾರ್ಡ್‍ಗಳ ನೀರು ಪರಿಶೀಲಿಸಲು ಸೂಚಿಸಿದ್ದೇನೆ. ಡಿವೈಎಸ್‍ಪಿ ನೇತೃತ್ವದಲ್ಲಿ ತನಿಖೆಗೆ ಸೂಚಿಸಿದ್ದೇನೆ. ಅಧಿಕಾರಿಗಳ ತಪ್ಪಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು. ಮೃತರಿಗೆ ಸಿಎಂ ಪರಿಹಾರ ನಿಧಿಯಿಂದ 5 ಲಕ್ಷ ಪರಿಹಾರ ನೀಡಲಾಗುವುದು. ಸಿಎಂ ರಿಲೀಫ್ ಫಂಡ್ ನಿಂದ ಪರಿಹಾರ ನೀಡಲಾಗುತ್ತೆ ಎಂದರು.

 

Share this Story:

Follow Webdunia kannada

ಮುಂದಿನ ಸುದ್ದಿ

ರಾಜಧಾನಿಗೆ ಆತಂಕ! ಹಂದಿ ಜ್ವರಕ್ಕೆ ಬಲಿ