Select Your Language

Notifications

webdunia
webdunia
webdunia
webdunia

ಇಶಿಯಾ ದ್ವೀಪದಲ್ಲಿ ಭೂಕುಸಿತ : 3 ವಾರದ ಶಿಶು ಸೇರಿ 7 ಸಾವು!

ಇಶಿಯಾ ದ್ವೀಪದಲ್ಲಿ ಭೂಕುಸಿತ : 3 ವಾರದ ಶಿಶು ಸೇರಿ 7 ಸಾವು!
ರೋಮ್ , ಸೋಮವಾರ, 28 ನವೆಂಬರ್ 2022 (12:07 IST)
ರೋಮ್ : ಇಟಲಿಯ ಇಶಿಯಾ ದ್ವೀಪದಲ್ಲಿರುವ ಜನನಿಬಿಡ ಬಂದರು ನಗರದಲ್ಲಿ ಭಾನುವಾರ ಭೂಕುಸಿತ ಉಂಟಾಗಿ 7 ಜನರು ಸಾವನ್ನಪ್ಪಿದ್ದಾರೆ ಮತ್ತು ಐವರು ನಾಪತ್ತೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇಶಿಯಾ ದ್ವೀಪದ ಉತ್ತರ ಭಾಗದಲ್ಲಿರುವ ಕ್ಯಾಂಪನಿಯಾದ ಮೆಟ್ರೋಪಾಲಿಟನ್ ಸಿಟಿ ಆಫ್ ನೇಪಲ್ಸ್ನಲ್ಲಿರುವ ಕಮ್ಯೂನ್ ಕ್ಯಾಸಮಿಸಿಯೋಲಾದಲ್ಲಿ ಭೂಕುಸಿತ ಉಂಟಾಗಿದ್ದು,

ಹಲವರು ಇನ್ನೂ ಅವಶೇಷಗಳಡಿ ಸಿಲುಕಿರುವುದಾಗಿ ಶಂಕಿಸಲಾಗಿದೆ. ಈಗಾಗಲೇ 3 ವಾರದ ಮಗು, ಒಂದು ಜೋಡಿ ಒಡಹುಟ್ಟಿದ ಮಕ್ಕಳು ಸೇರಿದಂತೆ 7 ಜನರ ಶವಗಳನ್ನು ಹೊರತೆಗೆಯಲಾಗಿದೆ.

ಭಾರೀ ಭೂಕುಸಿತದಿಂದಾಗಿ ಅನೇಕ ಕಟ್ಟಡಗಳು ಕುಸಿದಿದ್ದು, ಹಲವು ವಾಹನಗಳು ಸಮುದ್ರ ಪಾಲಾಗಿದೆ ಎಂದು ವರದಿಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ವಾಟ್ಸಪ್ ಬಳಕೆದಾರರ ಮಾಹಿತಿ ಸೋರಿಕೆ !